Tuesday, June 28, 2022

Latest Posts

ಎದೆ ಹಾಲಿನಿಂದ ತಯಾರಾಗ್ತಿದೆ ಅಂದದ ಪೆಂಡೆಂಟ್, ಮಗುವಿನ ಹೊಕ್ಕುಳ ಬಳ್ಳಿ, ಉಗುರಿನಿಂದ ಬಗೆಬಗೆಯ ಆಭರಣ!

  • ಕಾವ್ಯಾ ಜಕ್ಕೊಳ್ಳಿ

ಪ್ರತಿ ಅಮ್ಮನಿಗೂ ತನ್ನ ಮಕ್ಕಳೆಂದರೆ ಬಣ್ಣಿಸಲಾಗದ ಪ್ರೀತಿ, ಖಾಲಿಯಾಗದ ಒಲವು, ಅಖಂಡ ಕಾರಣ್ಯದ ತಂಪು, ತಂಗಾಳಿಯ ಹೊನಲು. ತನ್ನ ಮಗುವಿನ ಪ್ರತಿ ಬೆಳವಣಿಗೆಯನ್ನೂ ಆಕೆ ಸಂಭ್ರಮಿಸುತ್ತಾಳೆ. ಮಗ/ಮಗಳು ಮೊದಲು ಅಂಬೆಗಾಲಿಟ್ಟಿದ್ದು, ಪುಟಾಣಿ ಹೆಜ್ಜೆಯೂರಿದ್ದು, ತೊದಲು ಮಾತಿನಿಂದ ಅಮ್ಮಾ ಎಂದು ಕೂಗಿದ್ದು… ಇಂತಹ ಕ್ಷಣಗಳು ಎಂದಿಗೂ ಅವಳಿಗೆ ಮರೆಯಲಾಗದ್ದು, ಆಕೆಯ ನೆನೆಪಿನ ಜೋಳಿಗೆಯಲ್ಲಿ ಅವುಗಳೆಂದೂ ಜೀವಂತ.

ತಾಯಿ-ಮಗುವಿನ ಸಂಬಂಧವೇ ಒಂದು ಅಪೂರ್ವ, ಹೃದಯಂಗಮ. ಇದೀಗ ಈ ಬಾಂಧ್ಯವ್ಯವನ್ನು ಇನ್ನಷ್ಟು ಗಟ್ಟಿಮುಟ್ಟಾಗಿಸುವ ನಿಟ್ಟಿನಲ್ಲಿ ಬೆಂಗಳೂರಿನ ನಮಿತಾ ನವೀನ್‌ ಮುಂದಾಗಿದ್ದಾರೆ.

ನಮಿತಾ ಎದೆಹಾಲು, ಮಗುವಿನ ಹೊಕ್ಕಳಬಳ್ಳಿ, ಹಾಲು ಹಲ್ಲು, ಎಳೆ ಉಗುರು, ಕೂದನಿಂದ ಬೇರೆ ಬೇರೆ ಆಕಾರದ ಪೆಂಡೆಂಟ್‌, ಆಭರಣ, ಸ್ಮಾರಕವನ್ನು ತಯಾರಿಸುವ ವಿಶಿಷ್ಟ ಉದ್ಯಮವೊಂದನ್ನು ಶುರುಮಾಡಿದ್ದಾರೆ.

Karnataka woman comes up with mothers' milk jewellery to preserve memories forever - Daijiworld.com

ತಂದೆ-ತಾಯಿಗೆ ಮಕ್ಕಳು ಎಷ್ಟೇ ದೊಡ್ಡವರಾದರರೂ ಅವರು ಮಗುವಾಗಿದ್ದಾಗಿನ ಪ್ರತಿ ನೆನಪು ಅವಿಸ್ಮರಣೀಯ. ಈ ಅವಿಸ್ಮರಣೀಯ ನೆನಪುಗಳು ಎಂದಿಗೂ ಅಳಿಸಬಾರದೆಂಬುದು  ನಮಿತಾ ಅವರ ಆಶಯ.

ಈ ಯೋಚನೆ ಹೊಳೆದಿದ್ದು ಹೇಗೆ?

ನಮಿತಾ ಅವರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ ಸಮಯದಲ್ಲಿಯೇ ಇಂತಹದೊಂದು ಉದ್ಯಮ ಶುರು ಮಾಡುವ ಆಲೋಚನೆ ಹೊಳೆದಿತ್ತಂತೆ. ಕೆಲವೇ ದಿನಗಳಲ್ಲಿಯೇ ಪತಿಯ ಸಹಾಕಾರದೊಂದಿಗೆ ʼಮಮ್ಮಾಸ್ ಮಿಲ್ಕಿಟೇಲ್ʼ ಎಂಬ ಜ್ಯುವೆಲ್ಲರಿ ಶಾಪ್ ಆರಂಭಿಸಿದರು.

ಅಲ್ಲಿ ಅವರು ತಾಯಿಯ ಎದೆಹಾಲು, ಮಗುವಿನ‌ ಎಳೆಯ ಉಗುರು, ಹೊಕ್ಕುಳ ಬಳ್ಳಿ, ಕೂದಲು, ಹಾಲು ಹಲ್ಲುಗಳಿಂದ ಪೆಂಡೆಂಟ್, ಉಂಗುರ, ಕಿವಿಯೋಲೆ ಸೇರಿದಂತೆ ವಿವಿಧ ರೀತಿಯ ಆಭರಣಗಳು, ಸ್ಮಾರಕಗಳನ್ನು ತಯಾರಿಸುತ್ತಾರೆ. ಈ ಆಭರಣಗಳಿಗೆ ತುಂಬಾನೇ ಬೇಡಿಕೆ ಕೂಡ ಇದೆಯಂತೆ. ಈ ಉದ್ಯೋಗ ಆರಂಭಿಸಿ ಈಗಾಗಲೇ 5 ವರ್ಷಗಳೇ ಕಳೆದಿದ್ದು, ನಮಿತಾ ಅವರ ಹೆಚ್ಚಿನ ಗ್ರಾಹಕರು ಯುವ ತಾಯಂದಿರಾಗಿದ್ದಾರಂತೆ.

 ನಮಿತಾ ಮಾತು:

“ನಾನು ನೋಡಿದಂತೆ ತುಂಬಾ ತಾಯಂದಿರು ತಮ್ಮ ಮಕ್ಕಳ ನವಿರಾದ ಉಗುರು, ಹೊಕ್ಕುಳ ಬಳ್ಳಿ, ಹಲ್ಲುಗಳನ್ನು ಕಾಗದಲ್ಲಿ ಕಟ್ಟಿ ಅಥವಾ ಪೆಟ್ಟಿಗೆಯಲ್ಲಿ ಜೋಪಾನ ಮಾಡಿ ಇಟ್ಟಿರುತ್ತಾರೆ. ಕೆಲವೊಮ್ಮೆ ಅವುಗಳು ಕಳೆದು ಹೋಗುತ್ತವೆ. ಅದೇ ನೀವು ಇವುಗಳಿಂದ ಪೆಂಡೆಂಟ್, ಉಂಗುರ, ಕಿವಿಯೋಲೆ, ಸ್ಮಾರಕಗಳ ರೂಪದಲ್ಲಿ ನಿಮ್ಮ ಬಳಿ ಇರಿಸಿಕೊಂಡರೆ ಎಂದಿಗೂ ಅವು ನಿಮ್ಮಲ್ಲಿಯೇ ಇರುತ್ತವೆ. ಎಳೆ ಕಂದಮ್ಮಗಳ ಪ್ರತಿಯೊಂದು ಸ್ಮರಣೆಗಳನ್ನು ಜೋಪಾನವಾಗಿ ನಮ್ಮ ಬಳಿ ಇರಿಸಿಕೊಳ್ಳುವುದೇ ಜೀವನದ ಅತಿದೊಡ್ಡ ಆನಂದ” ಎಂದು ನಮಿತಾ ಹೇಳುತ್ತಾರೆ.

ಎದೆಹಾಲಿನಿಂದ ಆಭರಣ, ಪಡೆಂಟ್‌ ತಯಾರಿಕೆ ಹೇಗೆ?

ಎದೆಹಾಲಿನಿಂದ ಆಭರಣ ಅಥವಾ ಪೆಂಡೆಂಟ್‌ ತಯರಿಸುವಾಗ ಕೆಲವೊಂದು ವಿಧಾನಗಳನ್ನು ಅನುಸರಿಸಲಾಗುತ್ತದೆ. ಎದೆಹಾಲನ್ನು ಒಂದು ದಿನ ಶೇಖರಿಸಿಡಬೇಕಾಗುತ್ತದೆ. ನಂತರ ರಾಸಾಯನಿಕ ಹಾಕಿ ಹಾಲನ್ನು ಗಟ್ಟಿ ಮಾಡಲಾಗುತ್ತದೆ. ನಂತರ ಅದನ್ನು ಪೂರ್ತಿ ಒಣಗಲು ಬಿಟ್ಟು ಕೊನೆಯಲ್ಲಿ ಪುಡಿ ಪುಡಿ ಮಾಡಲಾಗುತ್ತದೆ. ಆ ಪುಡಿಗಳಿಂದ ಪೆಂಡೆಂಟ್‌ ಮತ್ತು ಆಭರಣಗಳನ್ನು ತಯಾರಿಸಲಾಗುತ್ತದೆ.

ಹೊಕ್ಕುಳ ಬಳ್ಳಿ ಆಭರಣಕ್ಕೆ ಭಾರೀ ಬೇಡಿಕೆ!

ನಮಿತಾ ಹೇಳುವಂತೆ, ಹೊಕ್ಕುಳಬಳ್ಳಿ ಆಭರಣಕ್ಕೆ ತುಂಬಾ ಬೇಡಿಕೆ ಇದೆಯಂತೆ. ಆಲ್‌ ಮೋಸ್ಟ್‌ ಎಲ್ಲ ಅಮ್ಮಂದಿರೂ ಹೊಕ್ಕುಳ ಬಳ್ಳಿ ಆಭರಣವನ್ನೇ ಕೇಳುತ್ತಾರಂತೆ.  ಹೊಕ್ಕುಳ ಬಳ್ಳಿಯನ್ನು ಪುಡಿ ಮಾಡಿ ಅದನ್ನು ಕೂಡ ಆಭರಣ ಇಲ್ಲವೇ ಪೆಂಡೆಂಟ್ ರೂಪದಲ್ಲಿ ತಯಾರಿಸಲಾಗುತ್ತದೆಯಂತೆ. ಗ್ಲಾಸ್‌ಬಾಲ್‌ನಲ್ಲಿ ಹೊಕ್ಕುಳ ಬಳ್ಳಿಯ ತುಂಡನ್ನು ಇರಿಸಿ ಬೇರೆ ಬೇರೆ ವಿನ್ಯಾಸದಲ್ಲಿ ಇದರಿಂದ ಪೆಂಡೆಂಟ್ ಹಾಗೂ ಸ್ಮಾರಕಗಳನ್ನು ರೆಡಿ ಮಾಡಲಾಗುತ್ತದೆಯಂತೆ.

Breast Milk- Umbilical Cordನಲ್ಲಿ ಆಭರಣ ತಯಾರಿಸುವ ಬೆಂಗಳೂರಿನ ಮಹಿಳೆ - Bengaluru based woman Namitha Naveen famous for breast milk jeweler stg ae– News18 Kannada

ಬೆಲೆ ಎಷ್ಟು?

ಆಭರಣ, ಪೆಂಡೆಂಟ್‌ಗಳು ಚಿನ್ನ ಅಥವಾ ಬೆಳ್ಳಿಯದ್ದಾಗಿದ್ದರೆ 1,300 ರೂ.ಗಳಿಂದ 3,500 ರೂ.ಗಳವರೆಗೂ ಇರುತ್ತದೆ. ಆದರೆ ಡಿಸೈನ್‌, ತೂಕ, ಅಳತೆ, ವಿನ್ಯಾಸ ಶುಲ್ಕ ಆಧರಿಸಿ ಬೆಲೆ ನಿರ್ಧರಿಸಲಾಗುತ್ತದೆ ಎಂದು ನಮಿತಾ ಹೇಳಿದ್ದಾರೆ.

ಸುಧಾ ಮಾತು:

ಸುಧಾ ಆನಂದ್‌ ನಮಿತಾ ಅವರಿಂದ ಎದೆ ಹಾಲು ಮತ್ತು ಹೊಕ್ಕುಳ ಬಳ್ಳಿಯಿಂದ ಆಭರಣ ತಯಾರಿಸಿಕೊಂಡಿದ್ದಾರೆ. ಅವರಿಗೆ ಆ ಆಭರಣಗಳು ತುಂಬಾನೇ ಇಷ್ಟವಾಗಿದೆಯಂತೆ. ಅದನ್ನು ತಮ್ಮ ಮಗುವಿಗೆ 18 ವರ್ಷ ತುಂಬಿದಾಗ ಸರ್ಫ್ರೈಸ್‌ ಆಗಿ ಕೊಡಬೇಕೆಂದು ಜೋಪಾನವಾಗಿ ಇಟ್ಟುಕೊಂಡಿದ್ದಾರಂತೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss