ನಮ್ಮ ಮೆಟ್ರೋ ಪರಿಷ್ಕೃತ ದರ ಪ್ರಕಟ, ಫೆ.9ರಿಂದ ಇದೇ ರೇಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಿಎಂಆರ್‌ಸಿಎಲ್‌ ಮತ್ತೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ರೇಟ್‌ ಹೆಚ್ಚಳದ ಬಿಸಿ ಮುಟ್ಟಿಸಿದೆ. ಇದೇ ಫೆಬ್ರವರಿ 9ರಿಂದ ಜಾರಿಗೆ ಬರುವಂತೆ ಮೆಟ್ರೋ ಟಿಕೆಟ್ ದರವನ್ನು ಶೇಕಡಾ 5ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಅಧಿಕೃತವಾಗಿ ಘೋಷಿಸಿದೆ. ದೂರಕ್ಕೆ ಅನುಗುಣವಾಗಿ ಕನಿಷ್ಠ 1 ರೂಪಾಯಿಯಿಂದ ಗರಿಷ್ಠ 5 ರೂಪಾಯಿಗಳವರೆಗೆ ದರ ಹೆಚ್ಚಳವಾಗಿದೆ. ಹೊಸ ದರವು ಫೆಬ್ರವರಿ 9ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ. ಪರಿಷ್ಕರಣೆ ಲಿಸ್ಟ್‌ ಇಲ್ಲಿದೆ..