ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ ನಂದಿನಿ ಹಾಲಿನ ದರದ ಏರಿಕೆ ಬಗ್ಗೆ ಸಾಕಷ್ಟು ತಿಂಗಳ ಹಿಂದಿನಿಂದಲೇ ಬೇಡಿಕೆ ಇಟ್ಟಿತ್ತು. ಇದೀಗ ಹಾಲಿನ ಲೀಟರ್ ದರ ಮೂರು ರೂಪಾಯಿಗೆ ಹೆಚ್ಚಳ ಮಾಡುವುದಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಸಭೆಯಲ್ಲಿ ನಾನಾ ವಿಷಯಗಳ ಬಗ್ಗೆ ಚರ್ಚೆಯಾಗಿದೆ. ನಂದಿನ ಹಾಲಿನ ದರ ಹೆಚ್ಚಳಕ್ಕೆ ಒಪ್ಪಿಗೆ, ಎಪಿಎಂಸಿಗಳಿಗೆ ರಸ್ತೆ ನಿರ್ಮಾಣ, ಮೂಲಭೂತ ಸೌಕರ್ಯಕ್ಕೆ ಹಣ ನೀಡುವ ಬಗ್ಗೆ ಮಾತನಾಡಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ಇದರ ಜತೆಗೆ 67 ಕೈದಿಗಳಿಗೆ ಖುಲಾಸೆ ಭಾಗ್ಯ ಸಿಕ್ಕಿದ್ದು, ಸನ್ನಡತೆ ಆಧಾರದ ಮೇಲೆ 67 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಆಗಸ್ಟ್ 15ರಂದು ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ರಾಜ್ಯದ ನಾನಾ ಜಿಲ್ಲೆಗಳಲ್ಲಿ ಇರುವ ಕೈದಿಗಳು ಇವರಾಗಿದ್ದು, ಇನ್ನೇನು ಬಿಡುಗಡೆ ಹೊಂದಲಿದ್ದಾರೆ.