Saturday, August 13, 2022

Latest Posts

ತಾಯಿ ನಿಧನಕ್ಕೆ ಪತ್ರ ಮುಖೇನ ಸಂತಾಪ ಸೂಚಿಸಿದ ಮೋದಿ: ದುಃಖದಲ್ಲಿ ಜೊತೆಯಾದ ಪ್ರಧಾನಿಗೆ ವಂದನೆ ಸಲ್ಲಿಸಿದ ನಟ ಅಕ್ಷಯ್!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ನಟ ಅಕ್ಷಯ್ ಕುಮಾರ್ ಅವರ ತಾಯಿ ಅರುಣಾ ಭಾಟಿಯಾ ಇತ್ತೀಚೆಗಷ್ಟೇ ನಿಧನರಾಗಿದ್ದರು. ಅವರ ನಿಧನಕ್ಕೆ ಪ್ರಧಾನಿ ನರೇಂದರ ಮೋದಿ ಸಂತಾಪ ಸೂಚಿಸಿದ ವಿಚಾರವನ್ನು ಅಕ್ಷಯ್ ಇದೀಗ ಬಹಿರಂಗಪಡಿಸಿದ್ದಾರೆ.
ಮೋದಿ ಅವರು ಕಳುಹಿಸಿದ ಪತ್ರವನ್ನು ಟ್ವಿಟರ್​ನಲ್ಲಿ ಹಂಚಿಕೊಂಡ ಅಕ್ಷಯ್, ದುಃಖದಲ್ಲಿ ಜೊತೆಯಾದ ಪ್ರಧಾನಿಗೆ ವಂದನೆ ಸಲ್ಲಿಸಿದ್ದಾರೆ.
ಮೋದಿ ತಮ್ಮ ಪತ್ರದಲ್ಲಿ, ‘ಭಾರತೀಯ ಚಿತ್ರರಂಗದಲ್ಲಿ ಅಕ್ಷಯ್ ತಮ್ಮದೇ ಛಾಪು ಮೂಡಿಸಲು ದಶಕಗಳ ಕಾಲ ನಡೆಸಿದ ಹೋರಾಟ ನಡೆಸಿದ್ದಾರೆ. ಆ ಹೋರಾಟಕ್ಕೆ ಅವರ ಪೋಷಕರು ತುಂಬಿದ ಮೌಲ್ಯಗಳೇ ಕಾರಣ’ ಎಂದು ಅಕ್ಷಯ್ ಪೋಷಕರನ್ನು ಪ್ರಶಂಸಿಸಿದ್ದಾರೆ.
ಪತ್ರವನ್ನು ಹಂಚಿಕೊಂಡಿರುವ ಅಕ್ಷಯ್, ‘ಅಮ್ಮನ ನಿಧನಕ್ಕೆ ಸಂತಾಪದ ಸಂದೇಶಗಳಿಂದ ವಿನಮ್ರನಾಗಿದ್ದೇನೆ, ಎಲ್ಲರಿಗೂ ಧನ್ಯವಾದಗಳು. ನನ್ನ ದಿವಂಗತ ಪೋಷಕರಿಗೆ ಆತ್ಮೀಯ ಭಾವನೆಗಳನ್ನು ವ್ಯಕ್ತಪಡಿಸಿದ ಈ ಅದ್ಭುತ ಸಂದೇಶಕ್ಕಾಗಿ ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ ಕೃತಜ್ಞತೆಗಳು. ಈ ಸಮಾಧಾನಕರ ಮಾತುಗಳು ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತವೆ. ಜೈ ಅಂಬೆ ” ಎಂದು ಅವರು ಬರೆದುಕೊಂಡು, ಮೋದಿ ಕಳುಹಿಸಿದ ಪತ್ರವನ್ನು ಪೋಸ್ಟ್ ಮಾಡಿ ಟ್ವೀಟ್ ಮಾಡಿದ್ದಾರೆ.
ಪತ್ರದಲ್ಲಿ ಪ್ರಧಾನಿಯವರು ಅಕ್ಷಯ್ ಅಂತಹ ನಟನನ್ನು ಬೆಳೆಸಿದ್ದಕ್ಕೆ ಅವರ ತಾಯಿಯನ್ನು ಶ್ಲಾಘಿಸಿದ್ದಾರೆ. ಹಾಗೆಯೇ ಅಕ್ಷಯ್ ನಟನೆಯನ್ನು ಹೊಗಳಿರುವ ಪ್ರಧಾನಿ, ‘ಭಾರತದ ಅತ್ಯಂತ ಮೆಚ್ಚುಗೆ ಪಡೆದ ನಟ ಹಾಗೂ ಬಹುಮುಖ ನಟರಲ್ಲಿ ಅಕ್ಷಯ್ ಒಬ್ಬರು’ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss