ಹೊಸ ದಿಗಂತ ಆನ್ ಲೈನ್ ಡೆಸ್ಕ್:
ವಿಜಯದಶಮಿ ಹಿನ್ನೆಲೆಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಾರ್ವಜನಿಕ ವಲಯದ 7 ಹೊಸ ರಕ್ಷಣಾ ಕಂಪನಿಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
‘ಚಾಲನೆ ನೀಡಿದ ನಂತರ ಮಾತನಾಡಿದ ಅವರು, ರಕ್ಷಣಾ ಕ್ಷೇತ್ರದಲ್ಲಿ ರಾಷ್ಟ್ರವನ್ನ ಸಬಲೀಕರಣಗೊಳಿಸುವ ಪ್ರಯತ್ನ ಇದಾಗಿದೆ. ಈ ಏಳು ಕಂಪನಿಗಳ ಆರಂಭವು ಈ ನಿರ್ಣಯದ ಪ್ರಯಾಣದ ಒಂದು ಭಾಗವಾಗಿದೆ. ಈ ನಿರ್ಧಾರವು ಕಳೆದ 15-20 ವರ್ಷಗಳಿಂದ ಬಾಕಿಯಿತ್ತು’ ಎಂದು ಹೇಳಿದರು.
ರಕ್ಷಣಾ ಇಲಾಖೆಯಿಂದ ಸ್ಥಾಪನೆಯಾಗಿರುವ 7 ರಕ್ಷಣಾ ಕಂಪನಿಗಳೆಂದರೆ, ಟ್ರೂಪ್ ಕಂಫರ್ಟ್ಸ್ ಲಿಮಿಟೆಡ್ (TCL), ಯಂತ್ರ ಇಂಡಿಯಾ ಲಿಮಿಟೆಡ್ (YIL), ಮುನಿಷನ್ಸ್ ಇಂಡಿಯಾ ಲಿಮಿಟೆಡ್ (MIL), ಆರ್ಮ್ಡ್ ವೆಹಿಕಲ್ಸ್ (ಶಸ್ತ್ರಸಜ್ಜಿತ ವಾಹನಗಳು) ನಿಗಮ ಲಿಮಿಟೆಡ್ (AVANI), ಅಡ್ವಾನ್ಸ್ಡ್ ವೆಪನ್ಸ್ ಅಂಡ್ ಇಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್ (AWE India), ಇಂಡಿಯಾ ಆಪ್ಟೆಲ್ ಲಿಮಿಟೆಡ್ (IOL) ಮತ್ತು ಗ್ಲೈಡರ್ಸ್ ಇಂಡಿಯಾ ಲಿಮಿಟೆಡ್ (GIL).
ಉದ್ಘಾಟನೆ ವೇಳೆ ರಕ್ಷಣಾ ಸಚಿವರು, ರಕ್ಷಣಾ ಖಾತೆ ಸಹಾಯಕ ಸಚಿವರು ಮತ್ತು ರಕ್ಷಣಾ ಉದ್ಯಮದ ಸಂಸ್ಥೆಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.