ಹಿಂದೂ ಸಂಪ್ರದಾಯದಂತೆ ಮದುವೆಯಾದ ನತಾಶಾ-ಹಾರ್ದಿಕ್ ಫೋಟೊಸ್ ವೈರಲ್..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಚ್ ಪ್ರೇಮಿಗಳ ದಿನದಂದು ಅದ್ಧೂರಿಯಾಗಿ ಮದುವೆಯಾದರು.

ಕ್ರಿಶ್ವಿಯನ್ ಶೈಲಿಯಲ್ಲಿ ಮದುವೆಯಾದ ಫೋಟೊಸ್ ಮಾತ್ರ ಶೇರ್ ಮಾಡಿದ್ದ ದಂಪತಿ ಇದೀಗ ಹಿಂದೂ ಸಂಪ್ರದಾಯದಂತೆ ಮದುವೆಯಾದ ಫೋಟೊಗಳನ್ನು ಹರಿಬಿಟ್ಟಿದ್ದಾರೆ. ಫೋಟೊಸ್ ಎಲ್ಲೆಡೆ ವೈರಲ್ ಆಗಿದ್ದು, ನತಾಶಾ ಹಿಂದೂ ವಧುವಿನ ರೂಪದಲ್ಲಿ ಸುಂದರವಾಗಿ ಕಾಣ್ತಿದ್ದಾರೆ ಅನ್ನೋದು ನೆಟ್ಟಿಗರ ಅಭಿಪ್ರಾಯವಾಗಿದೆ..

ಹಾರ್ದಿಕ್ ಪಾಂಡ್ಯ ಹಾಗೂ ನಟಿ ನತಾಶಾ ಸ್ಟಾಂಕೋವಿಚ್ ಮದುವೆ ಇತ್ತೀಚೆಗೆ ನೆರವೇರಿತ್ತು. ಈಗ ಈ ಜೋಡಿ ಮದುವೆಯ ಫೋಟೋಗಳನ್ನು ಹಂಚಿಕೊಳ್ಳುತ್ತಿದೆ.

ಈ ಮದುವೆ ಎರಡು ರೀತಿಯಲ್ಲಿ ನಡೆದಿತ್ತು. ಮೊದಲು ಈ ಇಬ್ಬರು ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದರೆ ನಂತರ ಪಾಶ್ಚಿಮಾತ್ಯ ಸಂಸ್ಕೃತಿ ಪ್ರಕಾರ ಮದುವೆ ಆಗಿದ್ದರು.

ಹಾರ್ದಿಕ್ ಪಾಂಡ್ಯ ಹಾಗೂ ನಟಿ ನತಾಶಾ ಸ್ಟಾಂಕೋವಿಚ್ ಅವರು ಈಗ ಹಿಂದೂ ಸಂಪ್ರದಾಯದ ಪ್ರಕಾರ ನಡೆದ ಮದುವೆ ಫೋಟೋ ಹಂಚಿಕೊಂಡಿದ್ದಾರೆ.

 

ಹಾರ್ದಿಕ್ ಪಾಂಡ್ಯ ಅವರು ರೋಹಿತ್ ಶರ್ಮಾ ಅವರ ಅಲಭ್ಯತೆಯಲ್ಲಿ ಟೀಂ ಇಂಡಿಯಾದ ಟಿ20 ತಂಡವನ್ನು ಮುನ್ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!