ನಾಥನ್ ಲಿಯಾನ್‌ ಸ್ಪಿನ್‌ ಬಲೆಗೆ ಬಿದ್ದ ಕೆರಿಬಿಯನ್ನರು; ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಗೆದ್ದ ಆಸ್ಟ್ರೇಲಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸ್ಪಿನ್ ಕಿಂಗ್ ನಾಥನ್ ಲಿಯಾನ್ 6 ವಿಕೆಟ್‌ಗಳ ಸಾಧನೆಯ ಬಲದಿಂದ ಆಸ್ಟ್ರೇಲಿಯಾವು ವೆಸ್ಟ್ ಇಂಡೀಸ್ ವಿರುದ್ಧ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಅನ್ನು 164 ರನ್‌ಗಳಿಂದ ಗೆದ್ದುಕೊಂಡಿತು.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ ನಲ್ಲಿ 598 ರನ್‌ ಗಳ ಬೃಹತ್‌ ಮೊತ್ತವನ್ನು ಕಲೆಹಾಕಿದರೆ, ಪ್ರತ್ಯುತ್ತರವಾಗಿ ಬ್ಯಾಟಿಂಗ್‌ ಗೆ ಇಳಿದ ವೆಸ್ಟ್‌ ಇಂಡೀಸ್‌ ಕೇವಲ 283 ರನ್‌ ಗಳಿಗೆ ತನ್ನ ಪ್ರಥಮ ಇನ್ನಿಂಗ್ಸ್‌ ಕೊನೆಗೊಳಿಸಿತ್ತು.
ಪಂದ್ಯದ ನಾಲ್ಕನೇ ದಿನ ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್ ಅನ್ನು 182-2 ಕ್ಕೆ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ ಕೆರಿಬಿಯನ್‌ ತಂಡದ ಗೆಲುವಿಗೆ 499 ರನ್‌ ಗಳ ಬೃಹತ್‌ ಗುರಿ ನೀಡಿತ್ತು. ಪಂದ್ಯದ ಕೊನೆ ದಿನ 333 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ನಾಯಕ ಕ್ರೇಗ್‌ ಬ್ರಾಥ್‌ ವೈಟ್ 110 ರನ್‌ ಗಳಿಸಿ ಏಕಾಂಗಿ ಹೋರಾಟ ತೋರಿದರು.
ಆಸಿಸ್‌ ಪರ ಎರಡನೇ ಇನ್ನಿಂಗ್ಸ್‌ ನಲ್ಲಿ ಮಿಂಚಿದ ಸ್ಪಿನ್ನರ್ ನಾಥನ್ ಲಿಯಾನ್ 128 ರನ್‌ ನೀಡಿ 6 ವಿಕೆಟ್‌ ಕಬಳಿಸಿದರು. ಈ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ ನಲ್ಲಿ 446 ನೇ ಬಲಿ ಪಡೆಯುವ ಮೂಲಕ ಭಾರತದ ರವಿಚಂದ್ರನ್ ಅಶ್ವಿನ್ ಅವರನ್ನು ಹಿಂದಿಕ್ಕಿ  ಎಂಟನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!