ಹೊಸದಿಗಂತ ಆನ್ ಲೈನ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಏಕಾಏಕಿ ಲಾಕ್ಡೌನ್ ಘೋಷಣೆಯಾಗಿದ್ದು, ಜನರು ಕೆಲವೇ ನಿಮಿಷಗಳಲ್ಲಿ ಓಡಿಬಂದು ಮದ್ಯದಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.
ದೆಹಲಿಯ ಖಾನ್ ಮರುಕಟ್ಟೆ, ಗೋಲ್ ಮಾರುಕಟ್ಟೆ ಸೇರಿದಂತೆ ಅನೇಕ ಪ್ರದೇಶಗಳಲ್ಲಿನ ವೈನ್ ಶಾಪ್ಗಳ ಮುಂದೆ ಅಪಾರ ಪ್ರಮಾಣದಲ್ಲಿ ಜನರು ನಿಂತಿದ್ದು, ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಕೊರೋನಾ ನಿಯಮಗಳಿಗೆ ಕ್ಯಾರೇ ಅಂತಿಲ್ಲ.
ಇಲ್ಲಿ ತರಕಾರಿ, ದಿನಸಿ, ಔಷಧಿಯಂತಹ ಅಗತ್ಯ ವಸ್ತುಗಳ ಬಗ್ಗೆ ಚಿಂತೆ ಬಿಟ್ಟು ಮದ್ಯವೇ ಸರ್ವಸ್ವ ಎಂದು ಜನಸಾಮಾನ್ಯರು ಕ್ಯೂನಲ್ಲಿ ನಿಂತಿದ್ದಾರೆ.
ದೆಹಲಿಯಲ್ಲಿ ಹೆಚ್ಚುತ್ತಿರುವ ಕೋವಿಡ್ ಕೇಸ್ಗಳನ್ನು ಗಮನದಲ್ಲಿಟ್ಟುಕೊಂಡು ಇಂದು ರಾತ್ರಿಯಿಂದ ಏಪ್ರಿಲ್ 26ರ ಬೆಳಗ್ಗೆ 6 ಗಂಟೆಯವರೆಗೆ ಲಾಕ್ಡೌನ್ ವಿಧಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಆದೇಶ ಹೊರಡಿಸಿದ್ದಾರೆ.ಅಗತ್ಯ ಹಾಗೂ ತುರ್ತು ಸೇವೆಗಳು ಮುಂದುವರೆಯಲಿವೆ.