ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ದಿಗಂತ ವರದಿ ಮೈಸೂರು:
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುವ ನಿರ್ಧಾರವಾಗಿದೆ ಎಂದು ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಆರೋಪಿಸಿದರು.
ಶುಕ್ರವಾರ ನಗರದ ರೈಲ್ವೆ ನಿಲ್ದಾಣದ ಬಳಿಯಿರುವ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯು ಗ್ರಾಮೀಣ, ಬಡ, ದಲಿತ, ದುರ್ಬಲ ವರ್ಗದವರ ವಿರೋಧ ನೀತಿಯಾಗಿರುವ ಕಾರಣ ಯಾವುದೇ ಕಾರಣಕ್ಕೂ ಜಾರಿಯಾಗಬಾರದು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಆಗುವ ತೊಂದರೆಗಳ ಬಗ್ಗೆ ಪ್ರಧಾನ ಮಂತ್ರಿಗಳು, ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೆ. ಆತುರವಾಗಿ ಏಕಮುಖವಾಗಿ ತೀರ್ಮಾನ ಮಾಡದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆದರೆ ತರಾತುರಿಯಲ್ಲಿ ರಾಜ್ಯ ಸರ್ಕಾರ ನೂತನ ಶಿಕ್ಷಣ ನೀತಿ ಜಾರಿಗೆ ತರಲು ಹೊರಟಿದೆ ಎಂದು ಕಿಡಿಕಾರಿದರು.
ರಾಧಾಕೃಷ್ಣನ್ ಕಮಿಟಿ ವರದಿಯಂತೆ 1968ರಲ್ಲಿ ಹೊಸ ಶಿಕ್ಷಣ ನೀತಿ ತಂದು ಜಾರಿ ಮಾಡಲಾಗಿತ್ತು. 20 ವರ್ಷಗಳ ನಂತರ 1986 ಕೊಟಾರಿಯಾ ಸಮಿತಿ ನೇಮಕ ಮಾಡಿ, 1/3 ಫಾರಿನ್ ಮೆಂಬರ್ ಗಳೊಂದಿಗೆ ಸಮಗ್ರ ಶಿಕ್ಷಣ ನೀತಿ ಕೊಟ್ಟಿದ್ದರು. ಇಡೀ ದೇಶದಲ್ಲಿ ಏಕಮುಖ ಶಿಕ್ಷಣ ನೀತಿ ಇರಬೇಕು ಅಂತ ಒಂದು ಅಧ್ಯಯನ ಮಾಡಿ, 3+2 ಶಿಕ್ಷಣ ನೀತಿ ಜಾರಿ ಮಾಡಿದರು. ಭಾರತದ ದೇಶ ಬಡವರು, ಹೆಣ್ಣುಮಕ್ಳಳು, ಧೀನದಲಿತರ ಅನುಕೂಲವಾಗುವ ಒಂದು ಶಿಕ್ಷಣ ನೀತಿ ಜಾರಿ ಮಾಡಿದರು ಎಂದು ಹೇಳಿದರು.
ಅಮೇರಿಕಾದಿಂದ ಪ್ರೇರೇಪಿತರಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ
ಶಿಕ್ಷಣ ನೀತಿ ಜಾರಿ ಮಾಡಲು ಮುಂದಾಗಿದೆ. ವರ್ಷದ ಡಿಗ್ರಿ ಕೋರ್ಸ್ ಮಾಡಿದ್ದಾರೆ. 2 ವರ್ಷದ ಡಿಗ್ರಿ, ನಾಲ್ಕು ವರ್ಷದ ಡಿಗ್ರಿ ಮಾಡಿದ್ದಾರೆ. ಇದನ್ನ ನಿವೃತ್ತ ಕ್ಯಾಬಿನೆಟ್ ಕಾರ್ಯದರ್ಶಿ ಯಾವುದೇ ಅಧ್ಯಯನ ಮಾಡದೆ 4 ವರ್ಷದ ಡಿಗ್ರಿ ಕೋರ್ಸ್ ಮಾಡಿದ್ದಾರೆ. ಇದರಿಂದ ಗ್ರಾಮೀಣ, ಹಿಂದುಳಿದ, ದುರ್ಬಲ ವರ್ಗದವರು ವಂಚಿತರಾಗುತ್ತಾರೆ. ಇದು ಒಂದು ವ್ಯವಸ್ಥಿತ ಯೋಜನೆ ಇಲ್ಲ. ಇವರ ಮೂಲ ಉದ್ದೇಶ ಅಮೇರಿಕಾಗೆ ಹೋಗಿ, ಓದುವವರಿಗೆ ಅನುಕೂಲ ಮಾಡುವುದು. ಇದೊಂದು ಗೊಂದಲದ ತೀರ್ಮಾನವಾಗಿದೆ. ಪಾರ್ಲಿಮೆಂಟ್ನಲ್ಲಿ ಇದು ಚರ್ಚೆ ಆಗಿಲ್ಲ ಎಂದರು.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಬೇಕು. ತಾಂತ್ರಿಕ ಶಿಕ್ಷಣ ಬೇಕು. ರಾಷ್ಟ್ರೀಯ
ಶಿಕ್ಷಣ ನೀತಿಯನ್ನ ಜಾರಿಗೆ ತಂದರೆ 4 ವರ್ಷ ಸಮಯ ಮತ್ತು ಹಣ ವ್ಯರ್ಥವಾಗಲಿದೆ. ಕೊಟಾರಿಯಾ ಕಮಿಷನ್ ಇದನ್ನು ರಿಜೆಕ್ಟ್ ಕೂಡ ಮಾಡಿದೆ. ಇದು ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುವ ನಿರ್ಧಾರ ಎಂದು ಆರೋಪಿಸಿದರು.
ನವಿಲು ಯಾವುದು. ಕೆಂಬೂತ ಯಾವುದು ಅಂತ ಜನರಿಗೆ ಗೊತ್ತಿದೆ. ಬೆಂಗಳೂರು- ಮೈಸೂರು ದಶಪಥ ರಸ್ತೆ ರುವಾರಿ ಯಾರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಎಚ್ ಸಿ ಮಹದೇವಪ್ಪ. ನವಿಲು ಯಾವುದು. ಕೆಂಬೂತ ಯಾವುದು ಅಂತ ಜನರಿಗೆ ಗೊತ್ತಿದೆ. ಈ ಯೋಜನೆ ಶುರು ಮಾಡಿದ್ದು ಯಾರು ಅಂತಾ ಜನರಿಗೆ ಗೊತ್ತಿದೆ. ನಾನೇ ಮಾಡಿದ್ದು ನಾನೇ ಮಾಡಿದ್ದು ಎಂದು ನಾನು ಎಂದು ಹೇಳಿಲ್ಲ. ಬಿ.ಎಸ್. ಯಡಿಯೂರಪ್ಪ ಅವರೇ ನನಗೆ ಹುಬ್ಬಳಿಯಲ್ಲೆ ಸನ್ಮಾನ ಮಾಡಿದ್ದಾರೆ. ಇದಕ್ಕಿಂತಾ ಇನ್ನೇನೂ ಬೇಕು ಎಂದು ಟಾಂಗ್ ನೀಡಿದರು.
ನಾಗರಹೊಳೆಯ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಹೆಸರು ಬದಲಾವಣೆ ಮಾಡಬೇಕೆಂಬ ಪ್ರಸ್ತಾವನೆಗೆ ಪ್ರತಿಕ್ರಿಯಿಸಿ, ಸದ್ಯ ಭಾರತದ ಹೆಸರು ಬದಲಾಯಿಸಲು ಅವರು ಮುಂದಾಗುತ್ತಿಲ್ಲವಲ್ಲ. ಇದು ಅವರ ಮನಃಸ್ಥಿತಿ. ಹೆಸರು ಬದಲಾವಣೆ ಮಾಡೋದು ಬಿಟ್ಟು, ಕಾಡಿನ ಸಂರಕ್ಷಣೆಗೆ ಒತ್ತು ನೀಡಲಿ. ಕೆರೆ ಕಟ್ಟೆಗೆ ನೀರು ತುಂಬಿಸುವ ಕೆಲಸ ಮಾಡಲಿ ಎಂದು ತಿರುಗೇಟು ನೀಡಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಮೂರ್ತಿ, ಗ್ರಾಮಾಂತರ ಅಧ್ಯಕ್ಷ ವಿಜಯಕುಮಾರ್ ಮತ್ತಿತರರು ಇದ್ದರು.