‘ರಾಷ್ಟ್ರೀಯ ಹಿತಾಸಕ್ತಿ ಮೊದಲು’: ರಾಜಕೀಯ ಭಾರತದ ಗಡಿಗಳನ್ನು ದುರ್ಬಲಗೊಳಿಸಬಾರದು ಎಂದ ಜೈಶಂಕರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ʼಈ ದಿನದ ರಾಜಕೀಯ ಒತ್ತಾಯಗಳು ದೇಶದ ಗಡಿಗಳನ್ನು ದುರ್ಬಲಗೊಳಿಸಬಾರದು ಮತ್ತು ರಾಷ್ಟ್ರದ ಹಿತಾಸಕ್ತಿಗೆ ಧಕ್ಕೆ ತರಬಾರದುʼ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಕಲ್ಕತ್ತಾದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್, “ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡುವುದು ಮುಖ್ಯ, ದಿನದ ರಾಜಕೀಯವು ರಾಷ್ಟ್ರದ ಹಿತಾಸಕ್ತಿಗೆ ಅಡ್ಡಿಯಾಗಬಾರದು. ಎಲ್ಲಾ ರಾಜಕಾರಣಿಗಳು ಮೊದಲು ಆ ವಿಧಾನಕ್ಕೆ ಪ್ರಾಶಸ್ತ್ಯ ಕೊಡಬೇಕು. ರಾಜಕೀಯವು ನಮ್ಮ ಗಡಿಗಳನ್ನು ದುರ್ಬಲಗೊಳಿಸಬಾರದು” ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಆರ್ಟಿಕಲ್ 370 ರದ್ದತಿ ಕುರಿತು ಮಾತನಾಡಿದ ಇಎಎಂ ಜೈಶಂಕರ್, ದಿನದ ರಾಜಕೀಯವನ್ನು ಹೊರತುಪಡಿಸಿ ತಾತ್ಕಾಲಿಕ ನಿಬಂಧನೆಯು ಇಷ್ಟು ದಿನ ಮುಂದುವರಿಯಲು ಕಾರಣವೇನು ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಅಲ್ಲಿ ನಮಗೆ ಅಂತಹ ಗೊಂದಲಮಯ ಸಮಸ್ಯೆ ಇತ್ತು ಎಂಬ ಅಂಶವನ್ನು ಇಡೀ ಜಗತ್ತು ಬಳಸಿಕೊಂಡಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಭಾರತದ ಕೊಡುಗೆ ಅಥವಾ ಭಾಗವಹಿಸುವಿಕೆ ಇಲ್ಲದೆ ಪ್ರಸ್ತುತ ಕಾಲದ ದೊಡ್ಡ ಸಮಸ್ಯೆಗಳನ್ನು ಪರಿಹರಿಸಲಾಗುವುದಿಲ್ಲ ಎಂಬುದು ಜಗತ್ತಿಗೆ ಅರ್ಥವಾಗಿದೆ. ರಾಜಕೀಯ ಸ್ಥಾನಮಾನ, ಆರ್ಥಿಕ ತೂಕ, ತಂತ್ರಜ್ಞಾನ ಸಾಮರ್ಥ್ಯಗಳು ಮತ್ತು ಸಾಂಸ್ಕೃತಿಕ ಪ್ರಭಾವಗಳಲ್ಲಿನ ಬದಲಾವಣೆಗಳ ಸಂಯೋಜನೆಯು ದೇಶವನ್ನು ಉನ್ನತ ಕಕ್ಷೆಗೆ ಕೊಂಡೊಯ್ಯುತ್ತಿದೆ ಎಂದು ಅವರು ಹೇಳಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!