21 ವರ್ಷದ ಬೆಂಗಾಲಿ ನಟಿ ಅಪಾರ್ಟ್‌ಮೆಂಟ್‌ ನಲ್ಲಿ ಶವವಾಗಿ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಬೆಂಗಾಲಿ ಚಿತ್ರೋದ್ಯಮದಲ್ಲಿ ದುರಂತಗಳ ಮೇಲೆ ದುರಂತ ಸಂಭವಿಸುತ್ತಿದೆ. 21 ವರ್ಷದ ಬಂಗಾಳಿ ಚಲನಚಿತ್ರ ತಾರೆ ಬಿದಿಶಾ ಡಿ. ಮಜುಂದಾರ್ ಅವರು ಕೋಲ್ಕತ್ತಾದ ದಮ್ ಡಮ್ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೆಲವೇ ದಿನಗಳ ಹಿಂದೆ ಮೇ 15 ರಂದು ಖ್ಯಾತ ಬೆಂಗಾಲಿ ನಟಿ ಪಲ್ಲವಿ ಡೇ ಅವರು ಕೊಲ್ಕತ್ತಾದ ಗರ್ಫಾ ಪ್ರದೇಶದಲ್ಲಿನ ತಮ್ಮ ಅಪಾರ್ಟ್‌ ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಚಿತ್ರೋದ್ಯಮಕ್ಕೆ ಆಘಾತ ತಂದಿತ್ತು. ಇದೀಗ ಕೆಲವೇ ದಿನಗಳ ಅಂತರದಲ್ಲಿ ಮತ್ತೋರ್ವ ಚಿತ್ರನಟಿ ಶವವಾಗಿ ಪತ್ತೆಯಾಗಿದ್ದಾರೆ.
ಮಜುಂದಾರ್ ಒಂದೂವರೆ ತಿಂಗಳಿನಿಂದ ದಮ್ ಡಮ್ ನ ನಾಗರ್‌ಬಜಾರ್ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ ನಲ್ಲಿ ವಾಸಿಸುತ್ತಿದ್ದರು. ಒಂದೆರಡು ದಿನಗಳಿಂದ ಆಕೆಯ ಅಪಾರ್ಟ್ಮೆಂಟ್ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಈಗ್ಗೆ ಆಕೆಯ ಗೆಳೆಯ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದ. ಈ ಮಾಹಿತಿಯನ್ವಯ ಪೊಲೀಸರು ಬಾಗಿಲು ಒಡೆದು ನೋಡಿದಾಗ ಬಿದಿಶಾ ಮಜುಂದಾರ್ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಪ್ರಾಥಮಿಕ ತನಿಖೆಯಲ್ಲಿ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ತಿಳಿದು ಬಂದಿದೆ. ಆದರೆ, ಪೊಲೀಸರು ಹೆಚ್ಚಿನ ತನಿಖೆಗೆ ಮುಂದಾಗಿದ್ದು ಬಿದಿಶಾ ಕುಟುಂಬ ಹಾಗೂ ಆಪ್ತ ಸ್ನೇಹಿತರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಆಕೆಯ ನಿವಾಸದಲ್ಲಿ ಡೆತ್‌ ನೋಟ್‌ ಸಹ ಪತ್ತೆಯಾಗಿದ್ದು ಚಿತ್ರರಂಗದಲ್ಲಿ ಅವಕಾಶಗಳ ಕೊರತೆಯಿಂದ ನಿರಾಸೆಗೊಂಡು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂಬ ಬರೆಯಲಾಗಿದೆ.
ಬಿದಿಶಾ ಡಿ 2021 ರಲ್ಲಿ ಪ್ರಸಿದ್ಧ ನಟ ದೇಬ್ರಾಜ್ ಮುಖರ್ಜಿ ಅವರೊಂದಿಗೆ ‘ಭಾರ್- ದಿ ಕ್ಲೌನ್’ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!