ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಘೋಷಣೆ: ಶರತ್ ಕಮಲ್ ಗೆ ಒಲಿದ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು 2022ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಘೋಷಿಸಿದೆ. ನವೆಂಬರ್ 30ರಂದು (ಬುಧವಾರ) ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಟೇಬಲ್ ಟೆನಿಸ್ ಆಟಗಾರ ಅಚಂತ ಶರತ್ ಕಮಲ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ಬಾರಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾದ ಏಕೈಕ ಆಟಗಾರರಾಗಿದ್ದಾರೆ.

ಶಟ್ಲರ್’ಗಳಾದ ಲಕ್ಷ್ಯ ಸೇನ್, ಎಚ್.ಎಸ್.ಪ್ರಣಯ್, ಮಹಿಳಾ ಬಾಕ್ಸರ್ ನಿಖತ್ ಜರೀನ್, ಅಥ್ಲೀಟ್ಗಳಾದ ಎಲ್ಡೋಸ್ ಪಾಲ್, ಅವಿನಾಶ್ ಸೇಬಲ್ ಸೇರಿದಂತೆ ಒಟ್ಟು 25 ಕ್ರೀಡಾಪಟುಗಳು ಈ ವರ್ಷದ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ 2022:
ಅಚಂತ ಶರತ್ ಕಮಲ್.

ಅರ್ಜುನ ಪ್ರಶಸ್ತಿಗಳು:
ಸೀಮಾ ಪೂನಿಯಾ (ಅಥ್ಲೆಟಿಕ್ಸ್), ಎಲ್ಡೋಸ್ ಪಾಲ್ (ಅಥ್ಲೆಟಿಕ್ಸ್), ಅವಿನಾಶ್ ಮುಕುಂದ್ ಸಬಲ್ (ಅಥ್ಲೆಟಿಕ್ಸ್), ಲಕ್ಷ್ಯ ಸೇನ್ (ಬ್ಯಾಡ್ಮಿಂಟನ್), ಎಚ್.ಎಸ್.ಪ್ರಣಯ್ (ಬ್ಯಾಡ್ಮಿಂಟನ್), ಅಮಿತ್ (ಬಾಕ್ಸಿಂಗ್), ನಿಖತ್ ಜರೀನ್ (ಬಾಕ್ಸಿಂಗ್), ಭಕ್ತಿ ಪ್ರದೀಪ್ ಕುಲಕರ್ಣಿ (ಚೆಸ್), ಆರ್.ಪ್ರಜ್ಞಾನಂದ (ಚೆಸ್), ದೀಪ್ ಗ್ರೇಸ್ ಎಕ್ಕಾ (ಹಾಕಿ), ಶುಶಿಲಾ ದೇವಿ (ಜೂಡೋ), ಸಾಕ್ಷಿ ಕುಮಾರಿ (ಕಬಡ್ಡಿ), ನಯನ್ ಮೋನಿ ಸೈಕಿಯಾ (ಕಬಡ್ಡಿ), ನಯನ್ ಮೋನಿ ಸೈಕಿಯಾ (ಲಾನ್ ಬೌಲ್). ಸಾಗರ್ ಕೈಲಾಸ್ ಓವ್ಹಾಲ್ಕರ್ (ಮಲ್ಲಖಾಂಬ್), ಎಲವೆನಿಲ್ ವಲರಿವನ್ (ಶೂಟಿಂಗ್), ಓಂಪ್ರಕಾಶ್ ಮಿಥರ್ವಾಲ್ (ಶೂಟಿಂಗ್), ಶ್ರೀಜಾ ಅಕುಲಾ (ಟೇಬಲ್ ಟೆನಿಸ್), ವಿಕಾಸ್ ಠಾಕೂರ್ (ವೇಟ್ ಲಿಫ್ಟಿಂಗ್), ಅಂಶು (ಕುಸ್ತಿ), ಸರಿತಾ (ಕುಸ್ತಿ), ಪರ್ವೀನ್ (ವುಶು), ಮಾನಸಿ ಗಿರೀಶಚಂದ್ರ ಜೋಶಿ (ಪ್ಯಾರಾ ಬ್ಯಾಡ್ಮಿಂಟನ್), ತರುಣ್ ಧಿಲ್ಲೋನ್ (ಪ್ಯಾರಾ ಬ್ಯಾಡ್ಮಿಂಟನ್), ಸ್ವಪ್ನಿಲ್ ಸಂಜಯ್ ಪಾಟೀಲ್ (ಪ್ಯಾರಾ ಈಜು), ಜೆರ್ಲಿನ್ ಅನಿಕಾ ಜೆ (ಕಿವುಡ ಬ್ಯಾಡ್ಮಿಂಟನ್).

ದ್ರೋಣಾಚಾರ್ಯ ಪ್ರಶಸ್ತಿ ನಿಯಮಿತ ವಿಭಾಗ:
ಜೀವನ್ಜೋತ್ ಸಿಂಗ್ ತೇಜಾ (ಬಿಲ್ಲುಗಾರಿಕೆ), ಮೊಹಮ್ಮದ್ ಅಲಿ ಕಮರ್ (ಬಾಕ್ಸಿಂಗ್), ಸುಮಾ ಸಿದ್ಧಾರ್ಥ್ ಶಿರೂರು (ಪ್ಯಾರಾ ಶೂಟಿಂಗ್)

ಜೀವಮಾನ ವಿಭಾಗ:
ದಿನೇಶ್ ಜವಾಹರ್ ಲಾಡ್ (ಕ್ರಿಕೆಟ್), ಬಿಮಲ್ ಪ್ರಫುಲ್ಲಾ ಘೋಷ್ (ಫುಟ್ಬಾಲ್), ರಾಜ್ ಸಿಂಗ್ (ಕುಸ್ತಿ).

ಜೀವಮಾನದ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿ:
ಅಶ್ವಿನಿ ಅಕ್ಕುಂಜಿ ಸಿ (ಅಥ್ಲೆಟಿಕ್ಸ್), ಧರ್ಮವೀರ್ ಸಿಂಗ್ (ಹಾಕಿ), ಬಿ.ಸಿ.ಸುರೇಶ್ (ಕಬಡ್ಡಿ), ನಿರ್ ಬಹದ್ದೂರ್ ಗುರುಂಗ್ (ಪ್ಯಾರಾ ಅಥ್ಲೆಟಿಕ್ಸ್).

ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ 2022:
ಉದಯೋನ್ಮುಖ ಮತ್ತು ಯುವ ಪ್ರತಿಭೆಗಳ ಗುರುತಿಸುವಿಕೆ ಮತ್ತು ಪೋಷಣೆ (ಟ್ರಾನ್ಸ್‌ಸ್ಟಡಿಯಾ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್),
ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಮೂಲಕ ಕ್ರೀಡೆಗೆ ಪ್ರೋತ್ಸಾಹ(ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ)ಅಭಿವೃದ್ಧಿಗಾಗಿ ಕ್ರೀಡೆ(ಲಡಾಖ್ ಸ್ಕೀ ಮತ್ತು ಸ್ನೋಬೋರ್ಡ್ ಅಸೋಸಿಯೇಷನ್)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!