ರಾಷ್ಟ್ರೀಯ ಯುವ ದಿನ 2023 : ಸ್ವಾಮಿ ವಿವೇಕಾನಂದರ ಸ್ಫೂರ್ತಿದಾಯಕ ನುಡಿಮುತ್ತುಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ ಎನ್ನುವ ಕರೆ ನೀಡಿದ ಮಹಾನ್​ ಚೇತನ ಸ್ವಾಮಿ ವಿವೇಕಾನಂದರ 160ನೇ ಜನ್ಮದಿನ. ಈ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಕೂಡ ಆಚರಿಸಲಾಗುವುದು.

ಯುವಜನತೆ ಮೇಲೆ ಅಪಾರ ನಂಬಿಕೆಯಿಟ್ಟ ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ಅವರ ಸ್ಫೂರ್ತಿದಾಯಕ ಉಲ್ಲೇಖಗಳನ್ನು ಇಲ್ಲಿ ನೀಡಲಾಗಿದೆ ಓದಿ ತಿಳಿಯಿರಿ.

ಸ್ವಾಮಿ ವಿವೇಕಾನಂದರ ಸ್ಫೂರ್ತಿದಾಯಕ ನುಡಿಮುತ್ತುಗಳು :

“ಏಳಿ, ಎದ್ದೇಳಿ ಮತ್ತು ಗುರಿ ತಲುಪುವವರೆಗೂ ನಿಲ್ಲದಿರಿ” – ಸ್ವಾಮಿ ವಿವೇಕಾನಂದ

“ಸಾಧನೆ ಮಾಡಲು ಹೊರಟವನಿಗೆ ದಾರಿಯಲ್ಲಿ ಬೆಕ್ಕುಗಳಿಗಿಂತ ಹೆಚ್ಚು ಜನಗಳೇ ಅಡ್ಡ ಬರುತ್ತಾರೆ” – ಸ್ವಾಮಿ ವಿವೇಕಾನಂದ

“ಈ ಪ್ರಪಂಚ ಒಂದು ದೊಡ್ಡ ಗರಡಿ ಮನೆ, ನಾವಿಲ್ಲಿ ಬಲಿಷ್ಟರಾಗುವುದಕ್ಕೆ ಬಂದಿದ್ದೇವೆ” – ಸ್ವಾಮಿ ವಿವೇಕಾನಂದ

“ಮನಸ್ಸನ್ನು ಶಕ್ತಿಯುತವೂ, ಶಿಸ್ತುಬದ್ಧವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವುದು” – ಸ್ವಾಮಿ ವಿವೇಕಾನಂದ

“ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ ” – ಸ್ವಾಮಿ ವಿವೇಕಾನಂದ

“ನಿಜವಾದ ಶಿಕ್ಷಣವೆಂದರೇ ಮಾನವೀಯತೆಯ ವಿಕಾಸ ” – ಸ್ವಾಮಿ ವಿವೇಕಾನಂದ

“ಮಾನವನಲ್ಲಿ ಈಗಾಗಲೇ ಅಡಗಿರುವ ದೈವತ್ವವನ್ನು ಪ್ರಕಾಶಪಡಿಸುವುದೇ ಧರ್ಮ” – ಸ್ವಾಮಿ ವಿವೇಕಾನಂದ

“ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ. ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ” – ಸ್ವಾಮಿ ವಿವೇಕಾನಂದ

“ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ” -ಸ್ವಾಮಿ ವಿವೇಕಾನಂದ

“ಅನುಭವವು ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ. ಉಸಿರಾಡುವವರೆಗೂ ಕಲಿಕೆ, ಜ್ಞಾನಾರ್ಜನೆಯೇ ಜೀವನದ ಗುರಿಯಾಗಿರಲಿ” – ಸ್ವಾಮಿ ವಿವೇಕಾನಂದ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!