ಬರದ ನಡುವೆ ಪ್ರಕೃತಿಯ ಸರ್ಪ್ರೈಸ್: ಬೋರ್‌ವೆಲ್‌ನಿಂದ ಬಾನೆತ್ತರಕ್ಕೆ ಚಿಮ್ಮಿದ ಜಲಧಾರೆ

ಹೊಸದಿಗಂತ ವರದಿ ವಿಜಯನಗರ: ​ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಕಲ್ಲು ಗ್ರಾಮದಲ್ಲಿ ಒಣ ಭೂಮಿಯಲ್ಲಿ ಕೊರೆಸಿದ ಬೋರ್‌ವೆಲ್‌ ಒಂದರಲ್ಲಿ ಭಾರೀ ಪ್ರಮಾಣದ ನೀರು ಬಾನೆತ್ತರಕ್ಕೆ ಚಿಮ್ಮಿದ ಅಪರೂಪದ ಘಟನೆ ನಡೆದಿದೆ. ​ಗ್ರಾಮದ ರೈತ ಸುನೀಲ್ ಎಂಬುವವರು ತಮ್ಮ ಬೆದ್ದಲು (ಖುಷ್ಕಿ) ಭೂಮಿಯಲ್ಲಿ ಕೃಷಿ ಉದ್ದೇಶಕ್ಕಾಗಿ ಬೋರ್‌ವೆಲ್ ಕೊರೆಸುತ್ತಿದ್ದರು. ಈ ವೇಳೆ ಅಂತರ್ಜಲದ ಭಾರೀ ಒತ್ತಡಕ್ಕೆ ಸಿಲುಕಿದ ಜಲಧಾರೆ, ಪಂಪ್ ಅಳವಡಿಸುವ ಮುನ್ನವೇ ಕಾರಂಜಿಯಂತೆ ಮೇಲಕ್ಕೆ ಚಿಮ್ಮಿದೆ. ಬರದ ನಾಡಿನಲ್ಲಿ ಗಂಗಾ ಮಾತೆಯ ಭರಪೂರ ಹರಿದು ಬಂದಿದ್ದನ್ನು ಕಂಡು ರೈತ ಸುನೀಲ್ … Continue reading ಬರದ ನಡುವೆ ಪ್ರಕೃತಿಯ ಸರ್ಪ್ರೈಸ್: ಬೋರ್‌ವೆಲ್‌ನಿಂದ ಬಾನೆತ್ತರಕ್ಕೆ ಚಿಮ್ಮಿದ ಜಲಧಾರೆ