ಸೇನಾಪಡೆಯ MiG 29K ಫೈಟರ್ ವಿಮಾನ ಗೋವಾ ಕರಾವಳಿಯಲ್ಲಿ ಪತನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತೀಯ ಸೇನಾಪಡೆಯ ಮಿಗ್ 29ಕೆ ಯುದ್ಧ ವಿಮಾನವು ಗೋವಾ ಕರಾವಳಿಯಲ್ಲಿ ಪತನವಾಗಿದ್ದು, ಪೈಲೆಟ್‌ ಗಳನ್ನು ರಕ್ಷಿಸಲಾಗಿದೆ.
ವಾಡಿಕೆಯ ಕಾರ್ಯಾಚರಣೆಯಂತೆ ಗೋವಾ ಕರಾವಳಿ ಭಾಗದಲ್ಲಿ ಸುತ್ತಡುತ್ತಿದ್ದ ವಿಮಾನವು ಸಮುದ್ರದ ಮೇಲೆ ಪತನಗೊಂಡಿದೆ. ವಿಮಾನ ಬೇಸ್‌ಗೆ ಮರಳುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ತಕ್ಷಣವೇ ಪೈಲಟ್ ಸುರಕ್ಷಿತವಾಗಿ ಹೊರಬಿದ್ದಿದ್ದಾರೆ. ಮತ್ತು ತ್ವರಿತ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ಮೂಲಕ ಪೈಲೆಟ್‌ ಗಳನ್ನು ರಕ್ಷಿಸಲಾಗಿದೆ. ಪೈಲಟ್ ಸ್ಥಿತಿ ಸ್ಥಿರವಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

ಘಟನೆಯ ಕಾರಣವನ್ನು ತನಿಖೆ ಮಾಡುವಂತೆ ತನಿಖಾ ಮಂಡಳಿಗೆ (BoI) ಆದೇಶಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!