ಕನಸಿನ ಬಂಗಲೆ ನಿರ್ಮಿಸಿ, ತಂದೆಯ ಹೆಸರಿಟ್ಟ ಈ ಬಾಲಿವುಡ್‌ ನಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್‌ ನಟ ನವಾಜುದ್ದೀನ್‌ ಸಿದ್ದಿಕಿ ಈಗ ಹೊಸ ಬಂಗಲೆ ನಿರ್ಮಿಸಿದ್ದು, ಅದಕ್ಕೆ ತಂದೆಯ ಹೆಸರನ್ನು ಇಟ್ಟಿದ್ದಾರೆ.
ನೂತನವಾಗಿ ನಿರ್ಮಾಣಗೊಂಡ ಈ ಬ್ಲೂ ಬಂಗಲೆಯ ಫೋಟೋ ಎಲೆಡೆ ವೈರಲ್‌ ಆಗುತ್ತಿದೆ. ಈ ಮನೆಗೆ ನಜಾವುದ್ದೀನ್ ಸಿದ್ದಿಕಿ ಅವರ ತಂದೆ ನವಾಬುದ್ದೀನ್‌ ಸಿದ್ದಿಕಿ ಅವರ ಹೆಸರು ಇಟ್ಟಿದ್ದಾರೆ. ಜತೆಗೆ ಇದನ್ನು ನವಾಬ್‌ ಎಂದು ಕರೆಯಲಾಗುತ್ತದೆ.

Nawazuddin Siddiqui builds dream bungalow in Mumbai, names it Nawab after  his father - Movies Newsನವಾಜುದ್ದೀನ್‌ ಅವರ ಇಚ್ಛೆಯಂತೆ ಈ ಬಂಗಲೆ ನಿರ್ಮಾಣಗೊಂಡಿದ್ದು, ನಿರ್ಮಾಣ ಪೂರ್ಣಗೊಳ್ಳಲು ಮೂರು ವರ್ಷ ತೆಗೆದುಕೊಂಡಿದೆ. ಉತ್ತರ ಪ್ರದೇಶದಲ್ಲಿನ ಬುದಾನದಲ್ಲಿರುವ ತಮ್ಮ ಹಳೆಯ ಮನೆಯಿಂದ ವಿನ್ಯಾಸದ ಐಡಿಯಾ ಪಡೆದಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ, ನವಾಜುದ್ದೀನ್ ತಮ್ಮ ಬಂಗಲೆಯ ಚಿತ್ರವನ್ನು ಇನ್‌ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!