Monday, August 8, 2022

Latest Posts

ಒಟಿಟಿ ವೇದಿಕೆಗೆ ಗುಡ್ ಬೈ ಹೇಳಿದ್ದಾರೆ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕ್ಕಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕ್ಕಿ ಇನ್ಮುಂದೆ ಒಟಿಟಿ ವೇದಿಕೆಯಲ್ಲಿ ನಟಿಸೋದಿಲ್ಲ ಎಂದಿದ್ದಾರೆ.
ಹೆಚ್ಚು ವೆಬ್ ಸಿರೀಸ್ ನಲ್ಲಿ ತೊಡಗಿಸಿಕೊಂಡಿದ್ದ ನಟ ಸಿದ್ದಿಕ್ಕಿ ಅವರು ಒಟಿಟಿ ವೇದಿಕೆಗಳು ದೊಡ್ಡ ನಿರ್ಮಾಣ ಸಂಸ್ಥೆಗಳ ದಂಧೆಯಾಗಿದೆ ಎಂದು ಆರೋಪ ಮಾಡಿದ್ದಾರೆ.
ಒಟಿಟಿಯ ನಟನೆಯ ಮೂಲಕ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಈ ಬಳಿಕ ಒಟಿಟಿ ತೊರೆಯುವ ನಿರ್ಧಾರ ಮಾಡಿದ್ದಾರೆ.
ಒಟಿಟಿ ವೇದಿಕೆ ಅನಗತ್ಯ ಪ್ರದರ್ಶನಗಳ ಡಂಪಿಂಗ್ ಯಾರ್ಡ್ ಆಗಿದೆ. ಇಲ್ಲಿ ನಮಗೆ ಆದ್ಯತೆಯಲ್ಲಿ ನೋಡುವ ಪ್ರದರ್ಶನಗಳು ಕಡಿಮೆಯಾಗುತ್ತಿದೆ ಎಂದಿದ್ದಾರೆ.
ಸ್ಟಾರ್ ಎಂದು ಕರೆಯಲ್ಪಡುವ ನಟರಿಗೆ ಈ ವೇದಿಕೆ ದಂಧೆಯಾಗಿದೆ ಎಂದು ಕಿಡಿಕಾರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss