ಎಂಕಾಂನಲ್ಲಿ ಕೂಡಿಗೆಯ ಪಟ್ಟಡ ನಯನಿಕಾ ನೀಲಮ್ಮಗೆ ಚಿನ್ನದ ಪದಕ

ಹೊಸದಿಗಂತ ವರದಿ, ಕುಶಾಲನಗರ:

ಕೂಡಿಗೆಯ ಪಟ್ಟಡ ನಯನಿಕಾ ನೀಲಮ್ಮ ಅವರು 2018-2020 ನೇ ಸಾಲಿನ ಎಂ.ಕಾಂ.ಪದವಿಯಲ್ಲಿ ಪ್ರಥಮ ರಾಂಕ್’ನೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.
ಇವರು ಕೂಡಿಗೆಯ ಪಟ್ಟಡ ಮಾದಪ್ಪ ಅವರ ಮೊಮ್ಮಗಳು ಹಾಗೂ ವೇಣು ಮಾದಪ್ಪ ಮತ್ತು ತೇಜ ತಂಗಮ್ಮ ಅವರ ಪುತ್ರಿಯಾಗಿದ್ದು, ಎಂ.ಕಾಂ. ಪದವಿಯನ್ನು ಮೈಸೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಚಿನ್ನದ ಪದಕದೊಂದಿಗೆ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.


ಇವರು ಪ್ರಸ್ತುತ ಮೈಸೂರು ವಿದ್ಯಾ ವಿಕಾಸ ಕಾಲೇಜಿನಲ್ಲಿ ಸಹಾಯಕ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!