ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಶಾರುಖ್ ಖಾನ್ ಜೊತೆ ಅಭಿನಯ ಮಾಡೋ ಆಫರ್ ಬಂದ್ರೆ ಸಾಕು ಎಂದು ಟಾಪ್ ಹೀರೋಯಿನ್‌ಗಳೂ ಕೂಡ ಅಂದುಕೊಳ್ಳೋದುಂಟು. ಇದೀಗ ಶಾರುಖ್ ನಟನೆಯ ಜವಾನ್ ಇನ್ನೇನು ಕೆಲವೇ ದಿನಗಳಲ್ಲಿ ತೆರೆಕಾಣಲಿದೆ, ಈ ಸಿನಿಮಾದಲ್ಲಿ ಶಾರುಖ್‌ಗೆ ನಯನತಾರಾ ಜೊತೆಯಾಗಿದ್ದಾರೆ.
ಈ ಮಧ್ಯೆ ಇಂಟ್ರೆಸ್ಟಿಂಗ್ ವಿಷಯವೊಂದು ಹೊರಬಿದ್ದಿದೆ. ಈ ಹಿಂದೆಯೇ ಅಂದ್ರೆ 10 ವರ್ಷ ಹಿಂದೆ ಶಾರುಖ್ ಜೊತೆ ಸ್ಕ್ರೀನ್ ಶೇರ್ ಮಾಡೋ ಆಫರ್ ನಯನತಾರಾಗೆ ಬಂದಿತ್ತಂತೆ. ನಯನತಾರಾ ಈ ಆಫರ್ ರಿಜೆಕ್ಟ್ ಮಾಡಿದ್ದು, ಪ್ರಿಯಾಮಣಿ ಅಭಿನಯ ಮಾಡಿದ್ದಾರೆ.
ಯಾವ ಸಿನಿಮಾ ಅಂತಿದ್ದೀರಾ? ಚೆನ್ನೈ ಎಕ್ಸ್‌ಪ್ರೆಸ್ ಸಿನಿಮಾದಲ್ಲಿ ಪ್ರಿಯಾಮಣಿ ಹಾಡಿ ಕುಣಿದಿರುವ ಒನ್ ಟು ಥ್ರೀ ಫೋರ್ ಹಾಡು. ಈ ಹಾಡಲ್ಲಿ ನಟಿಸೋ ಆಫರ್‌ನ್ನು ನಯನತಾರಾ ರಿಜೆಕ್ಟ್ ಮಾಡಿದ್ರು.