Thursday, August 11, 2022

Latest Posts

ರಾಜ್ಯಕ್ಕೆ ಆಗಮಿಸಿದ ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು: ಮಳೆಯಲ್ಲೇ ಸ್ವಾಗತಿಸಿದ ಸಿಎಂ, ಕಟೀಲ್​

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಷ್ಟ್ರಪತಿ ಚುನಾವಣೆಯ ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ರಾಜ್ಯಕ್ಕೆ ಆಗಮಿಸಿದ್ದು, ಶಾಸಕರು ಮತ್ತು ಸಂಸದರಿಂದ ಮತ ಯಾಚನೆ ಮಾಡುತ್ತಿದ್ದಾರೆ.
ಬೆಂಗಳುರು ನಗರದ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಸಿಎಂ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ವಾಗತಿಸಿದರು.
ಈಗಾಗಲೇ ದೂರವಾಣಿ ಮೂಲಕ ರಾಜ್ಯ ಘಟಕದ ಜೊತೆ ಮಾತುಕತೆ ನಡೆಸಿದ್ದ ಮುರ್ಮು ಅವರು ಇಂದು ಖುದ್ದು ಆಗಮಿಸಿ ಮತ ಯಾಚನೆ ಮಾಡುತ್ತಿದ್ದಾರೆ.
ಳೆದ ಮೂರು ದಿನದಿಂದ ಸುರಿಯುತ್ತಿರುವ ಮಳೆ ಇಂದು ಕೂಡ ಮುಂದುವರೆದಿದ್ದು, ಛತ್ರಿಗಳನ್ನು ಹಿಡಿದೇ ರಾಷ್ಟ್ರಪತಿ ಅಭ್ಯರ್ಥಿಯನ್ನು ಸ್ವಾಗತಿಸಲಾಯಿತು. ನಂತರ ವಸಂತ ನಗರದಲ್ಲಿರುವ ಖಾಸಗಿ ಹೋಟೆಲ್​ಗೆ ತೆರಳಿದ ಮುರ್ಮು ಪಕ್ಷದ ಶಾಸಕರು ಮತ್ತು ಸಂಸದರ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಮುರ್ಮು ಸ್ವಾಗತಕ್ಕೆ ವಿವಿಧ ಕಲಾ ತಂಡಗಳೊಂದಿಗೆ ಸ್ವಾಗತಕ್ಕೆ ತಯಾರಿ ಮಾಡಿಕೊಂಡಿದ್ದ ಬಿಜೆಪಿ ಆದಿವಾಸಿ ಕಲಾ ತಂಡಗಳ ಮೂಲಕವೇ ಸ್ವಾಗತ ಕೋರಿತು. ಆದಿವಾಸಿ ಸಮಾಜದ ಮಹಿಳೆಯಾಗಿರುವ ಮುರ್ಮು ಅವರನ್ನು ಆ ಸಮುದಾಯದ ಕಲಾ ತಂಡಗಳಿಂದಲೇ ಸ್ವಾಗತಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss