ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರಣತಂತ್ರ ರೂಪಿಸಲ ಈಗಾಗಲೇ ವಿಪಕ್ಷಗಳು ಒಂದಾಗಿದ್ದು, (Lok Sabha Election) INDIA ಎಂಬ ಹೆಸರಿನಲ್ಲಿ ಮೈತ್ರಿಕೂಟ ರಚಿಸಿ ಸಭೆಗಳನ್ನು ಮಾಡುತ್ತಿದೆ.
ಇದೀಗ ಮೂರನೇ ಸಭೆಯನ್ನು ಮುಂಬೈಯಲ್ಲಿ ಆಯೋಜಿಸಲು ಸಿದ್ಧತೆ ನಡೆಸಿದ್ದು, ಇದರ ಬೆನ್ನಲ್ಲೇ ಇದಕ್ಕೆ ಠಕ್ಕರ್ ಕೊಡಲು NDA ಒಕ್ಕೂಟದಿಂದಲೂ ಮುಂಬೈನಲ್ಲಿ (Mumbai) ಸಭೆ ನಡೆಸಲು ತಿರ್ಮಾನಿಸಲಾಗಿದೆ.
ಆದ್ರೆ INDIA ಒಕ್ಕೂಟದ ಸಭೆ ಹಿನ್ನೆಲೆ ನಡೆಸುತ್ತಿಲ್ಲ. ಈ ಸಭೆ ಪೂರ್ವ ನಿಗದಿಯಾಗಿತ್ತು. ಸಭೆಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ (NCP) ಅಧಿಕೃತವಾಗಿ NDA ಸೇರಲಿದೆ ಎಂದು ಎನ್‌ಸಿಪಿ ಸಂಸದ ಸುನೀಲ್ ತಟ್ಕರೆ ತಿಳಿಸಿದ್ದಾರೆ.
ಇತ್ತ INDIA ಮೈತ್ರಿ ಒಕ್ಕೂಟಕ್ಕೂ ಮುಂಬೈನಲ್ಲಿ ನಡೆಯಲಿರುವ ಸಭೆ ನಿರ್ಣಾಯಕವಾಗಿದೆ. ಸಭೆಯಲ್ಲಿ ಒಕ್ಕೂಟಕ್ಕೆ ಒಂದು ಸಾಮಾನ್ಯ ಧ್ವಜ ಹೊಂದುವ ನಿರ್ಧಾರ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್, ಇನ್ನೂ ಕೆಲವು ಪ್ರಾದೇಶಿಕ ಪಕ್ಷಗಳು ಒಕ್ಕೂಟ ಸೇರುವ ಆಸಕ್ತಿ ತೋರಿಸಿವೆ. ಮುಂಬೈನಲ್ಲಿ ನಡೆಯಲಿರುವ ಸಭೆಯಲ್ಲಿ ಇದು ನಿರ್ಧಾರವಾಗಲಿದೆ. ನಮ್ಮ ಸಂಖ್ಯೆ ಇನ್ನಷ್ಟು ಹೆಚ್ಚಬಹುದು. ಎಲ್ಲರನ್ನೂ ಒಗ್ಗೂಡಿಸುವ ದಿಕ್ಕಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂದರು.