ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಅಂಕೋಲಾ:
ಬೆಳಸೆ ಚಂದುಮಠದ ಕಲ್ಲುಮಠ ಬಳಿ ಹೊಳೆ ಬದಿಯಲ್ಲಿ ವ್ಯಕ್ತಿಯೋರ್ವನ ಮೃತ ದೇಹ ಪತ್ತೆಯಾಗಿದೆ.
ಬೆಳಸೆ ತೆಂಕನಾಡ ನಿವಾಸಿ ಪ್ರಕಾಶ ವೆಂಕಪ್ಪ ಗೌಡ (42) ಮೃತ ವ್ಯಕ್ತಿ ಯಾಗಿದ್ದು ಈತ ಶನಿವಾರ ಸೆಪ್ಟೆಂಬರ್ 11 ರಂದು ಊರಿನ ಮನೆ ಮನೆಯ ಗಣಪತಿ ವಿಸರ್ಜನೆಗೆ ತೆರಳಿದವ ಮರಳಿ ಮನೆಗೆ ಬಂದಿರಲಿಲ್ಲ.
ಮಂಗಳವಾರ ಬೆಳಗ್ಗೆ ಕಲ್ಲುಮಠ ಹಳ್ಳದ ಬದಿಯಲ್ಲಿ ಮೃತ ದೇಹ ಪತ್ತೆಯಾಗಿದ್ದು ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದಾಗಿ ಅಂದಾಜಿಸಲಾಗಿದೆ.
ಮೃತನ ಸಹೋದರ ನೀಡಿರುವ ದೂರಿನಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.