SUMMER TIPS| ಬೆವರು ವಾಸನೆಯಿಂದ ಮುಕ್ತಿ ಬೇಕೇ? ಹೀಗೆ ಮಾಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈ ಬಾರಿ ಬಿಸಿಲ ಝಳ ಜೋರಾಗಿದೆ. ಸೆಕೆ ಸೆಕೆ… ಎಲ್ಲರ ಬಾಯಲ್ಲೂ ಇದೇ ಮಾತು. ವಿಪರೀತ ಸೆಕೆಯಿಂದ ಬೆವರು ಅತಿಯಾಗತೊಡಗಿದೆ. ಬೆವರಿನ ದುರ್ನಾಥ ಒಂದೆಡೆಯಾದರೆ, ಬಟ್ಟೆಗಳ ಮೇಲೆ ಇದು ಸಾಕಷ್ಟು ದುಷ್ಪರಿಣಾಮ ಬೀರುತ್ತದೆ. ಇವುಗಳಿಂದ ಮುಕ್ತಿಪಡೆಯಲು ಇಲ್ಲಿ ಕೆಲವೊಂದು ಟಿಪ್ಸ್‌ ಗಳಿವೆ.

ಸ್ನಾನಕ್ಕೂ ಮೊದಲು ಅತಿಯಾಗಿ ಬೆವರುವ ಕಂಕಳು ಹಾಗೂ ಇತರ ದೇಹದ ಭಾಗಗಳಿಗೆ ಲಿಂಬೆ ರಸವನ್ನು ಹಚ್ಚಿಕೊಳ್ಳಿ . ನಂತರ ಉಗುರು ಬಿಸಿ ನೀರಿನಲ್ಲಿ ಸ್ನಾನ ಮಾಡಿ. ಇದರಿಂದ ಬೆವರಿನ ದುರ್ಗಂಧ ದೂರವಾಗುತ್ತದೆ. ಗುಲಾಬಿ ಹೂವಿನ ದಳಗಳನ್ನು ನೀರಿನಲ್ಲಿ ಹಾಕಿಡಿ. ಆ ನೀರಿನಿಂದ ಸ್ನಾನ ಮಾಡಿದರೂ ಬೆವರು ವಾಸನೆ ದೂರವಾಗುತ್ತದೆ.

ನೀರಿನಲ್ಲಿ ನಿಂಬೆ ರಸವನ್ನು ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು ಬಟ್ಟೆಯಲ್ಲಿ ಬೆವರಿನಿಂದಾದ ಕಲೆ ಇರುವ ಜಾಗಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ಶುದ್ಧ ನೀರಿನಿಂದ ತೊಳೆಯಿರಿ. ಇದರಿಂದ ಬಟ್ಟೆ ಶುಭ್ರವಾಗುತ್ತದೆ. ಕಲೆಯೂ ಮಾಯವಾಗುತ್ತದೆ.

ಬೇಕಿಂಗ್ ಸೋಡಾದಲ್ಲಿ ನೀರನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಬೆವರು ಕಲೆಯ ಮೇಲೆ ಹಚ್ಚಿ. ಒಣಗಿದ ನಂತರ, ಶುದ್ಧ ನೀರಿನಿಂದ ಬಟ್ಟೆಯನ್ನು ತೊಳೆಯಿರಿ. ಬಟ್ಟೆಯಲ್ಲಿದ್ದ ಬೆವರು ಕಲೆಗಳು ಮಾಯವಾಗುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!