ʼಗಂಡೂ ಅಲ್ಲ ಹೆಣ್ಣೂ ಅಲ್ಲʼ- ಪ್ರಧಾನಿ ಮೋದಿ ಬುಡಕಟ್ಟು ಉಡುಪಿನ ಬಗ್ಗೆ ಟಿಎಂಸಿ ನಾಯಕನ ವಿವಾದಾತ್ಮಕ ಹೇಳಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಧಾನಿ ನರೇಂದ್ರ ಮೋದಿಯವರ ಉಡುಪಿನ ಬಗ್ಗೆ ‘ಗಂಡೂ ಅಲ್ಲ‌ ಹೆಣ್ಣೂ ಅಲ್ಲ’ ಎನ್ನುವ ಮೂಲಕ ಟಿಎಂಸಿ ನಾಯಕ ಕೀರ್ತಿ‌ಆಜಾದ್ ವಿವಾದ ಸೃಷ್ಟಿಸಿದ್ದಾರೆ.

ಇತ್ತೀಚೆಗಷ್ಟೇ ಈಶಾನ್ಯ‌ರಾಜ್ಯದ ಶಿಲ್ಲಾಂಗ್ ಪ್ರದೇಶಕ್ಕೆ‌ ಪ್ರಧಾನಿ ಮೋದಿ ಭೇಟಿ ನೀಡಿದ್ದರು. ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದರು. ಈ ವೇಳೆ ಪ್ರಧಾನಿ ಮೋದಿಯವರು ಅಲ್ಲಿನ ಬುಡಕ್ಕಟ್ಟಿನ ಸಾಂಪ್ರದಾಯಿಕ‌ ಖಾಸಿ ಉಡುಪು‌ ತೊಟ್ಟಿದ್ದರು. ಅವರ ಈ ಉಡುಪಿನ ಕುರಿತು ಟಿಎಂಸಿ ನಾಯಕ ವಿವಾವಾದಾತ್ಮಕ‌ ಹೇಳಿಕೆ‌ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕೀರ್ತಿ ಆಜಾದ್, ಪ್ರಧಾನಿಯವರ ಫೋಟೋದ ಜತೆಯಲ್ಲಿ ಇನ್ನೊಂದು ಫೋಟೋ ಹಂಚಿಕೊಂಡಿದ್ದು. ಅದರಲ್ಲಿ ಪ್ರಧಾನಿ ಮೋದಿಯವರು ಧರಿಸಿರುವ ಬಟ್ಟೆಯಂತೆಯೇ ಇರುವ ಉಡುಪನ್ನು ಮಹಿಳಾ ಮಾಡೆಲ್ ಧರಿಸಿದ್ದು ಯಾವುದೂ ಇ-ಕಾಮರ್ಸ್ ವೆಬ್ ಸೈಟಿನಲ್ಲಿ‌ ಆ ಉಡುಗೆ ಮಾರಾಟಕ್ಕಿದೆ ಎಂದು ಉಲ್ಲೇಖಿಸಿ, ‘ಗಂಡೂ ಅಲ್ಲ‌ ಹೆಣ್ಣೂ ಅಲ್ಲ, ಅವರೊಬ್ಬ ಫ್ಯಾಶನ್ ಆರಾಧಕ’ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಆದರೆ ಈ ಕುರಿತು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದು. ಅದು ನಿಜವಾದ ಫೋಟೋ ಅಲ್ಲ.‌ ಅದನ್ನು ಫೋಟೋ ಶಾಪ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಕೀರ್ತಿ ಆಜಾದ್ ರ ಈ ವಿವಾದಾತ್ಮಕ‌ ಹೇಳಿಕೆಗೆ ಹಲವು ಕಡೆಯಿಂದ ಆಕ್ಷೇಪಗಳು ವ್ಯಕ್ತವಾಗುತ್ತಿವೆ.

ಅಸ್ಸಾಂ‌ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಅವರು ಇದನ್ನು ಖಂಡಿಸಿದ್ದು ಪ್ರಧಾನಿಯವರನ್ನು ಟೀಕಿಸುವ ಬದಲು ಕೀರ್ತಿ ಆಜಾದ್ ನಮ್ಮ ಬುಡಕಟ್ಟು ಸಂಸ್ಕೃತಿ ಯನ್ನು ನಿಂದಿಸಿದ್ದಾರೆ. ಇದು ನಮ್ಮ ಬುಡಕಟ್ಟು ಸಂಸ್ಕೃತಿಗೆ ಮಾಡುತ್ತಿರುವ ಅವಮಾನ ಎಂದಿದ್ದಾರೆ. ಬಿಜೆಪಿ ಎಸ್ ಸಿ ಮೋರ್ಚಾವು ಕೀರ್ತಿ ಆಜಾದ್ ಅವರ ಅವಹೇಳನಕಾರಿ ಹೇಳಿಕೆಯ ವಿರುದ್ಧ ಅವರ ಮೇಲೆ ಕ್ರಮ‌ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಆದರೆ ಈ ಕುರಿತು ಕೀರ್ತಿ ಆಜಾದ್ ಪ್ರತಿಕ್ರಿಯಿಸಿದ್ದು, ನಾನು ಮೋದಿಯವರಿಗೆ ಅವಹೇಳನ ಮಾಡಿಲ್ಲ. ಬದಲಾಗಿ ಅವರ ಫ್ಯಾಶನ್ ಪ್ರಜ್ಞೆ ಯ ಬಗ್ಗೆ ಹೇಳುತ್ತಿದ್ದೇನೆ.‌ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!