ನೇಪಾಳ ವಿಮಾನ ಪತನ: ಭಾರತೀಯ ಪ್ರಯಾಣಿಕರ ಗುರುತು ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೇಪಾಳದಲ್ಲಿ ಭಾನುವಾರ ಬೆಳಗ್ಗೆ ನಾಪತ್ತೆಯಾಗಿದ್ದ ಕೊವಾಂಗ್​ ಪರ್ವತ ಪ್ರದೇಶದಲ್ಲಿ ವಿಮಾನ ಪತ್ತೆಯಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ.
ವಿಮಾನದಲ್ಲಿದ್ದ ಬಹುತೇಕ ಎಲ್ಲರೂ ಬದುಕುಳಿದಿರುವ ಸಾಧ್ಯತೆ ತೀರ ಕಡಿಮೆ ಎನ್ನಲಾಗಿದ್ದು,ಈ ನಡುವೆ ಭಾರತೀಯ ಮೂಲದ ನಾಲ್ವರು ಪ್ರಯಾಣಿಕರು ಮುಂಬೈ ಮೂಲದವರೆಂದು ತಿಳಿದುಬಂದಿದೆ.

ವಿಮಾನ ಪತನಗೊಂಡ ಸ್ಥಳದಲ್ಲಿ ಭೂ ಕುಸಿತ ಉಂಟಾಗಿರುವುದರಿಂದ ಸೇನೆ ಸ್ಥಳಕ್ಕೆ ತಲುಪುತ್ತಿದೆ ಎಂದು ವರದಿಯಾಗಿದೆ.

ತಾರಾ ಏರ್​ 9ಎನ್​​ಎಇಟಿ ಎರಡು ಇಂಜಿನ್​​ವುಳ್ಳ ಖಾಸಗಿ ವಿಮಾನ ಭಾನುವಾರ ಬೆಳಗ್ಗೆ ಕಣ್ಮರೆಯಾಗಿತ್ತು. ಪೋಖ್ರಾದಿಂದ ಹಾರಾಟ ನಡೆಸಿದ್ದ ವಿಮಾನ ಬೆಳಗ್ಗೆ 9.55ಕ್ಕೆ ಸಂಪರ್ಕ ಕಡಿತಗೊಂಡಿತ್ತು. ಕಠ್ಮಂಡುವಿನಿಂದ ಸುಮಾರು 200 ಕಿಮೀ ದೂರದ ಜೊಮ್ಸನ್​​ ನಗರದ ಬಳಿ ಹಾರಾಟ ನಡೆಸುವ ವೇಳೆ ವಿಮಾನ ನಾಪತ್ತೆಯಾಗಿತ್ತು.

ವಿಮಾನವು ಮುಸ್ತಾಂಗ್​​ ಜಿಲ್ಲೆಯಲ್ಲಿ ಹಾರಾಟ ನಡೆಸಿದ್ದು ಕಾಣಿಸಿಕೊಂಡ ಬಳಿಕ ಧೌಲಗಿರಿ ಪರ್ವತದತ್ತ ಹಾರಿದ ಬಳಿಕ ಕಣ್ಮರೆಯಾಗಿದೆ. ಅದೇ ಸಂದರ್ಭದಲ್ಲಿ ಸಂಪರ್ಕ ಕಡಿತಗೊಂಡಿದೆ ಎಂದು ಜಿಲ್ಲಾಧಿಕಾರಿ ನೇತ್ರಾ ಪ್ರಸಾದ್​​ ತಿಳಿಸಿದ್ದರು. ಇದೀಗ ವಿಮಾನ ಪತ್ತೆಯಾಗಿದೆ.

ಮುಂಬೈ ಮೂಲದ ಅಶೋಕ್​ ಕುಮಾರ್ ತ್ರಿಪಾಠಿ, ಧನುಶ್​​ ತ್ರಿಪಾಠಿ, ರಿತಿಕಾ ತ್ರಿಪಾಠೀ ಮತ್ತು ವೈಭವ ತ್ರಿಪಾಠಿ ಒಂದೇ ಕುಟುಂಬ ನಾಲ್ವರು ಇದ್ದರು. ಮೂವರು ಸಿಬ್ಬಂದಿ ಸೇರಿ ಜರ್ಮನ್​ನ ಇಬ್ಬರು ಮತ್ತು 13 ಮಂದಿ ನೇಪಾಳ ಮೂಲದವರಿದ್ದರು ಎಂದು ಏರ್​ಲೈನ್​ ವಕ್ತಾರ ಸುದರ್ಶನ್​ ಭರ್ತುವಾಲ ತಿಳಿಸಿದ್ದಾರೆ.

ನೇಪಾಳ ರಾಯಭಾರ ಕಚೇರಿಯ ಈ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಸಹಾಯವಾಣಿ ಸಂಖ್ಯೆ: 977-9851107021

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!