ನೇಪಾಳ ಸಾರ್ವತ್ರಿಕ ಚುನಾವಣೆ: ಇಂದು ಮಧ್ಯರಾತ್ರಿಯಿಂದಲೇ ಗಡಿ ಬಂದ್​

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನೇಪಾಳದಲ್ಲಿ ನವೆಂಬರ್​ 20 ರಂದು ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಭಾರತ ನೇಪಾಳ ಅಂತಾರಾಷ್ಟ್ರೀಯ ಗಡಿಯನ್ನು ನವೆಂಬರ್ 17 ರ ಮಧ್ಯರಾತ್ರಿಯಿಂದ​ 72 ಗಂಟೆಗಳ ಕಾಲ ಮುಚ್ಚಲು ನಿರ್ಧರಿಸಲಾಗಿದೆ.

ಈ ಬಗ್ಗೆ ಭಾರತದ ಗೃಹ ಇಲಾಖೆಗೆ ಪತ್ರ ಬರೆದಿರುವ ನೇಪಾಳ ಸರ್ಕಾರ ಮತದಾನದ ಬಳಿಕ ಅಂದರೆ, ನವೆಂಬರ್​ 20 ರಂದು ರಾತ್ರಿ 8 ಗಂಟೆಗೆ ಗಡಿ ತೆರೆಯಲಾಗುವುದು. ವಿಮಾನಗಳ ಮೂಲಕ ನೇಪಾಳಕ್ಕೆ ಬರುವ ಎಲ್ಲ ದೇಶಗಳ ಪ್ರಯಾಣಿಕರು ಪಾಸ್‌ಪೋರ್ಟ್ ಮತ್ತು ಟಿಕೆಟ್ ಅನ್ನು ಕಡ್ಡಾಯವಾಗಿ ಒಪ್ಪಿಸಬೇಕು. ಆಂಬ್ಯುಲೆನ್ಸ್, ನೀರು, ಹಾಲಿನ ಟ್ಯಾಂಕರ್, ಅಗ್ನಿಶಾಮಕ ವಾಹನ ಸೇರಿದಂತೆ ತುರ್ತು ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚುನಾವಣೆಯ ವೇಳೆ ಗಡಿ ಭಾಗದಿಂದ ಅಕ್ರಮ ಶಸ್ತ್ರಾಸ್ತ್ರಗಳು ಸರಬರಾಜಾಗುವ ಹಿನ್ನೆಲೆಯಲ್ಲಿ ಗಸ್ತು ಹೆಚ್ಚಿಸಲಾಗಿದೆ. ಶಾಂತಿಯುತವಾಗಿ ಚುನಾವಣೆ ನಡೆಸಲು ಎರಡೂ ದೇಶಗಳ ಭದ್ರತಾ ಪಡೆಗಳ ನಡುವೆ ಕಾರ್ಯತಂತ್ರ ರೂಪಿಸಲಾಗಿದೆ. ಇಂಡೋ-ನೇಪಾಳ ಗಡಿಯಿರುವ ವಾಲ್ಮೀಕಿನಗರದ ಗಂಡಕ್ ಬ್ಯಾರೇಜ್ ಬಳಿ ಭಾರತ ಮತ್ತು ನೇಪಾಳ ಜವಾನರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!