ನೇಪಾಳ ವಿಮಾನ ದುರಂತ: 21 ಪ್ರಯಾಣಿಕರ ಮೃತದೇಹಗಳು ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೇಪಾಳದಲ್ಲಿ ಉಂಟಾದ ವಿಮಾನ ಪತನದಲ್ಲಿ ಭಾರತೀಯರು ಸೇರಿದಂತೆ 22 ಜನರಿದ್ದ ವಿಮಾನದ ಅವಶೇಷಗಳಿಂದ 21 ಶವಗಳನ್ನು ಹೊರತೆಗೆಯಲಾಗಿದ್ದು, ಎಲ್ಲಾ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವಿಮಾನದಲ್ಲಿ 4 ಭಾರತೀಯರು ಸೇರಿ 22 ಮಂದಿ ಪ್ರಯಾಣಿಸುತ್ತಿದ್ದರು. ಈ ವಿಮಾನ ಅಪಘಾತದಲ್ಲಿ ಯಾರೂ ಬದುಕುಳಿಯಲು ಸಾಧ್ಯವಿಲ್ಲ ಎಂದು ನಮಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಆದರೆ ಅಧಿಕೃತ ಹೇಳಿಕೆಯು ಬಾಕಿಯಿದೆ ಎಂದು ಗೃಹ ಸಚಿವಾಲಯದ ವಕ್ತಾರ ಫದೀಂದ್ರ ಮಣಿ ಪೋಖ್ರೆಲ್ ಹೇಳಿದ್ದಾರೆ.

ನೇಪಾಳ ವಿಮಾನ ಪತನಗೊಂಡ ಸ್ಥಳದಲ್ಲಿ ಇದುವರೆಗೆ 21 ಮೃತದೇಹಗಳು ಪತ್ತೆಯಾಗಿವೆ. ಈ ವಿಮಾನವು 14,500 ಅಡಿ ಎತ್ತರದಲ್ಲಿ ಡಿಕ್ಕಿ ಹೊಡೆದ ನಂತರ ಪತನಗೊಂಡಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ. ಈ ಮೃತದೇಹಗಳನ್ನು ಹಿಂಪಡೆಯಲು 15 ನೇಪಾಳ ಸೇನೆಯ ಸೈನಿಕರ ತಂಡವನ್ನು ಸ್ಥಳದ ಬಳಿ ನೇಮಿಸಲಾಗಿದೆ ಎಂದು ನೇಪಾಳ ಸೇನೆಯ ವಕ್ತಾರರು ತಿಳಿಸಿದ್ದಾರೆ. .

ಭಾನುವಾರ ಬೆಳಗ್ಗೆ 10 ಗಂಟೆಗೆ ಪ್ರವಾಸಿ ನಗರವಾದ ಪೊಖರಾದಿಂದ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ತಾರಾ ಏರ್ ನಿರ್ವಹಿಸುತ್ತಿದ್ದ ಟರ್ಬೊಪ್ರಾಪ್ ಟ್ವಿನ್ ಓಟರ್ 9ಎನ್-ಎಇಟಿ ವಿಮಾನ ಸಂಪರ್ಕ ಕಳೆದುಕೊಂಡಿತ್ತು. ಕೆನಡಾ ನಿರ್ಮಿತ ವಿಮಾನವು ಪೋಖರಾ ನಗರದಿಂದ ಮಧ್ಯ ನೇಪಾಳದ ಜನಪ್ರಿಯ ಪ್ರವಾಸಿ ಪಟ್ಟಣವಾದ ಜೋಮ್ಸೋಮ್‌ಗೆ ಪ್ರಯಾಣಿಸುತ್ತಿತ್ತು. ಈ ವಿಮಾನವು ಮುಸ್ತಾಂಗ್‌ನಲ್ಲಿನ ಜೋಮ್ಸಮ್‌ನ ಆಕಾಶದಲ್ಲಿ ಕಾಣಿಸಿಕೊಂಡಿತು. ನಂತರ ಮೌಂಟ್ ಧೌಲಗಿರಿಗೆ ತಿರುಗಿತು. ಆಮೇಲೆ ವಿಮಾನ ಎಲ್ಲಿ ಹೋಯಿತು ಎಂಬುದೇ ಗೊತ್ತಾಗಲಿಲ್ಲ, ವಿಮಾನ ನಾಪತ್ತೆಯಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!