ವಿಮಾನ ದುರಂತ| ಪ್ರಯಾಣದ ಕೊನೆಯ ಕ್ಷಣಗಳ ವಿಡಿಯೋ ತೆಗೆದ ಪ್ರಯಾಣಿಕ: ಮನಕಲಕುವ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಯೇತಿ ಏರ್‌ಲೈನ್ಸ್‌ಗೆ ಸೇರಿದ ಎಟಿಆರ್-‌72 ವಿಮಾನ ನೆಲಕ್ಕೆ ಅಪ್ಪಳಿಸುವ ಮುನ್ನ ಪ್ರಯಾಣಿಕರೊಬ್ಬ ಫೇಸ್‌ಬುಕ್‌ ಲೈವ್‌ ಮಾಡಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಉತ್ತರ ಪ್ರದೇಶದ ಸೋನು ಜೈಸ್ವಾಲ್‌ ಎನ್ನುವವರು ಲೈವ್‌ ಮಾಡಿದ್ದರು. ಕೆಲವೇ ಕ್ಷಣಗಳ ವೀಡಿಯೋ ಇದಾಗಿದ್ದು, ಪ್ರಯಾಣದ ಕೊನೆಯ ಕ್ಷಣಗಳಲ್ಲಿ ಪ್ರಯಾಣಿಕರ ಚೀರಾಟ ಹಾಗೂ ಬೆಂಕಿಯ ಜ್ವಾಲೆಯನ್ನು ಕಾಣಬಹುದು.

ನೇಪಾಳದ ಪೊಖರಾದಲ್ಲಿ ಪ್ರಯಾಣಿಕ ವಿಮಾನವೊಂದು ಭಾನುವಾರ ಬೆಳಿಗ್ಗೆ ಪತನಗೊಂಡಿದ್ದು, ದುರಂತದಲ್ಲಿ 68 ಜನ ಸಾವಿಗೀಡಾಗಿದ್ದಾರೆ. ಈ ಪೈಕಿ ಐವರು ಭಾರತೀಯರು ಕೂಡ ಸೇರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!