ಇಸ್ರೇಲ್‌ ಪ್ರಧಾನಿಯಾಗಿ ಮತ್ತೆ ಅಧಿಕಾರಕ್ಕೇರಿದ ನೇತನ್ಯಾಹು: ಅಭಿನಂದಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಇಸ್ರೇಲಿನ ಪ್ರಧಾನಿಯಾಗಿ ಮತ್ತೊಮ್ಮೆ ಬೆಂಜಮಿನ್‌ ನೇತನ್ಯಾಹು ಆಯ್ಕೆಯಾಗಿದ್ದಾರೆ. ಮಂಗಳವಾರ ನಡೆದ ಚುನಾವಣೆಯಲ್ಲಿ ನೇನ್ಯಾಹು ಅವರ ಲಿಕುಟ್‌ ಪಕ್ಷವು ಮುನ್ನಡೆ ಸಾಧಿಸಿದ್ದು ನೇತನ್ಯಾಹು ಮತ್ತೊಮ್ಮೆ ಗದ್ದುಗೆಯೇರಿದ್ದಾರೆ.

ನಿನ್ನೆ ಚುನಾವಣಾ ಅಂತಿಮ ಫಲಿತಾಂಶಗಳು ಬಿಡುಗಡೆಯಾಗಿದ್ದು 120 ಸಂಸತ್ತು ಸ್ಥಾನಗಳ ಪೈಕಿ ಲಿಕುಡ್‌ ಪಕ್ಷವು 64 ಸ್ಥಾನಗಳನ್ನು ಗೆದ್ದಿದೆ. ಇದು ಕಳೆದ ನಾಲ್ಕು ವರ್ಷಗಳಲ್ಲಿ ನಡೆದ ಐದನೇ ಚುನಾವನೆಯಾಗಿದೆ.

73 ವರ್ಷ ವಯಸ್ಸಿನ ಬೆಂಜಮಿನ್ ನೆತನ್ಯಾಹು ಸಾರ್ವತ್ರಿಕ ಚುನಾವಣೆಯಲ್ಲಿ ಯೇರ್ ಲ್ಯಾಪಿಡ್ ಅವರನ್ನು ಮಣಿಸುವ ಮೂಲಕ ಮತ್ತೆ ಇಸ್ರೇಲ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಅವರು 15 ವರ್ಷಗಳ ಅವಧಿಯಲ್ಲಿ ಐದು ಬಾರಿ ಚುನಾಯಿತರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನ ಮಂತ್ರಿಯಾಗಿದ್ದಾರೆ. ಬೆಂಜಮಿನ್ ನೆತನ್ಯಾಹು ಅವರು 1996-99 ಮತ್ತು 2009ರಿಂದ 2021ರ ವರೆಗೆ ಇಸ್ರೆಲ್ ಪ್ರಧಾನಿಯಾಗಿದ್ದರು.

ಪ್ರಧಾನಿ ಮೋದಿ ಅಭಿನಂದನೆ:

ಮತ್ತೊಮ್ಮೆ ಇಸ್ರೇಲ್‌ ಪ್ರಧಾನಿಯಾಗಿ ಆಯ್ಕೆಯಾದ ಮಿತ್ರ ನೆತನ್ಯಾಹು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮೂಲಕ ಅಭಿನಂದನೆ ತಿಳಿಸಿದ್ದಾರೆ.
“ನಿಮ್ಮ ಚುನಾವಣಾ ಯಶಸ್ಸಿಗೆ ಅಭಿನಂದನೆಗಳು. ಭಾರತ-ಇಸ್ರೇಲ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಆಳಗೊಳಿಸಲು ನಮ್ಮ ಜಂಟಿ ಪ್ರಯತ್ನಗಳನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ” ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!