ಸ್ಟುಡಿಯೋ ಓಪನ್ ಮಾಡಿದ ನೆಟ್‌ಫ್ಲಿಕ್ಸ್: ಅದೂ ಕೂಡ ಎಲ್ಲಿ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾಗತಿಕ ಒಟಿಟಿ ವೇದಿಕೆಯಾದ ನೆಟ್‌ಫ್ಲಿಕ್ಸ್ ಭಾರತದಲ್ಲಿ ತನ್ನ ಹೂಡಿಕೆಯನ್ನು ವಿಸ್ತರಿಸುವತ್ತ ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದೆ. ತೆಲಂಗಾಣದ ಹೈದರಾಬಾದ್‌ನಲ್ಲಿ ಕಂಪನಿ ತನ್ನ ಪ್ರತಿಷ್ಠಿತ ‘ಐಲೈನ್ ಸ್ಟೂಡಿಯೋಸ್’ ಕೇಂದ್ರವನ್ನು ಆರಂಭಿಸಿದೆ. ಈ ಸ್ಟುಡಿಯೋವನ್ನು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಉದ್ಘಾಟಿಸಿದರು. ಉದ್ಘಾಟನಾ ಸಂದರ್ಭದಲ್ಲಿ ಮಾತನಾಡಿದ ಸಿಎಂ, ನೆಟ್‌ಫ್ಲಿಕ್ಸ್ ಹೈದರಾಬಾದ್‌ಗೆ ಬಂದಿರುವುದು ನಗರಕ್ಕೆ ಹಾಲಿವುಡ್ ಮಟ್ಟದ ಗುರುತನ್ನು ತಂದುಕೊಡಲಿದೆ ಎಂದು ಹೇಳಿದರು. ವಿಶ್ವದ ಕೆಲವು ಪ್ರಮುಖ ನಗರಗಳಲ್ಲಷ್ಟೇ ಇರುವ ಐಲೈನ್ ಸ್ಟುಡಿಯೋಗಳಲ್ಲಿ ಇದು ಐದನೇ ಕೇಂದ್ರವಾಗಿದೆ. … Continue reading ಸ್ಟುಡಿಯೋ ಓಪನ್ ಮಾಡಿದ ನೆಟ್‌ಫ್ಲಿಕ್ಸ್: ಅದೂ ಕೂಡ ಎಲ್ಲಿ ಗೊತ್ತಾ?