ನೆಟ್‌ಫ್ಲಿಕ್ಸ್‌ ಆದಾಯ ಕುಸಿತ, 150 ಉದ್ಯೋಗಿಗಳನ್ನು ಕೆಲಸದಿಂದ ವಜಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆದಾಯ ತೀವ್ರವಾಗಿ ಕುಸಿದಿರುವುದರಿಂದ ವೆಚ್ಚ ಕಡಿತಗೊಳಿಸಲು 150 ಜನರನ್ನು ಉದ್ಯೋಗದಿಂದ ವಜಾಗೊಳಿಸುವುದಾಗಿ ನೆಟ್‌ಫ್ಲಿಕ್ಸ್‌ ತಿಳಿಸಿದೆ. ವೈಯಕ್ತಿಕ ಕಾರ್ಯಕ್ಷಮತೆ ದೃಷ್ಟಿಯಿಂದ ಈ ನಿರ್ಧಾರ ಮಾಡಿಲ್ಲ. ಹಣಕಾಸಿನ ವಹಿವಾಟುಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ಕಂಪನಿ ತಿಳಿಸಿದೆ.

ಸಹೋದ್ಯೋಗಿಗಳನ್ನು ಮನೆಗೆ ಕಳುಹಿಸಲು ಮನಸ್ಸಿಲ್ಲ ಆದರೆ ನಮಗೆ ಬೇರೆ ದಾರಿ ಇಲ್ಲ ಎಂದಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ನೆಟ್‌ಫ್ಲಿಕ್ಸ್ 2 ಮಿಲಿಯನ್ ಚಂದಾದಾರರನ್ನು ಕಳೆದುಕೊಂಡು, ದೊಡ್ಡ ಹೊಡೆತವನ್ನು ಅನುಭವಿಸಿದೆ. ಇನ್ನು ಮೂರು ತಿಂಗಳಲ್ಲಿ ಈ ಸಂಖ್ಯೆ 20 ಲಕ್ಷ ತಲುಪುವ ಆತಂಕವನ್ನು ಹೊರಹಾಕಿದೆ.

ಇದು ಕಳೆದ ತಿಂಗಳು ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತರು ಮತ್ತು ಬರಹಗಾರರನ್ನು ವಜಾಗೊಳಿಸಿತ್ತು. ಕಳೆದ ವರ್ಷವಷ್ಟೇ ಈ ವೆಬ್ ಸೈಟ್ ಲಾಂಚ್‌ ಆಗಿದ್ದು, ಆದಾಯದ ಕೊರತೆಯಿಂದಾಗಿ ಇಡೀ ತಂಡವನ್ನು ವಜಾಗೊಳಿಸಿದೆ. ಕೆಲಸ ಮಾಡುವಂತೆ ಒತ್ತಡ ಹಾಕಿದರೆ ಅಥವಾ ಕೆಲಸ ಇಷ್ಟವಾಗದಿದ್ದರೆ ಸ್ವಯಂಪ್ರೇರಣೆಯಿಂದ ಹೊರಗೆ ಹೋಗಬಹುದು ಎಂದು ಕಡ್ಡಿ ಮುರಿದಂತೆ ಆದೇಶಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!