‘ನಾ ನಾಯಕಿ’ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯರ ನೋಟದ ಮೇಲೆ ಬಿತ್ತು ನೆಟ್ಟಿಗರ ಕಣ್ಣು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ : 

ಬೆಂಗಳೂರು ನಗರದ ಅರಮನೆ ಆವರಣದಲ್ಲಿ ಇಂದು ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಸಮಕ್ಷಮ ಕೆಪಿಸಿಸಿಯ ‘ನಾ ನಾಯಕಿ’ ಕಾರ್ಯಕ್ರಮ ನಡೆಯಿತು.

ಈ ವೇಳೆ ವೇದಿಕೆ ಮೇಲೆ ಪಕ್ಷದ ಪುರುಷ ನಾಯಕರಿಗೆ ಅವಕಾಶವಿರಲಿಲ್ಲ. ಆದರೆ ಕಾಂಗ್ರೆಸ್ ಜ್ಯೋತಿ ಬೆಳಗಿಸುವ ಸಮಯದಲ್ಲಿ ಅವರನ್ನು ವೇದಿಕೆಗೆ ಆಹ್ವಾನಿಸಲಾಯಿತು. ಹಾಗಾಗಿ ವೇದಿಕೆ ಬಂದಿದ್ದ ಹಿರಿಯ ನಾಯಕ ಸಿದ್ದರಾಮಯ್ಯ (Siddaramaiah) ವೇದಿಕೆಯಿಂದ ನಿರ್ಗಮಿಸುವಾಗ ಕಾರ್ಯಕ್ರಮದ ನಿರೂಪಕಿಯನ್ನು (anchor) ಕೆಳಗಿನಿಂದ ಮೇಲೆ, ಮೇಲಿಂದ ಕೆಳಗೆ ನೋಡುತ್ತಾ ಸಾಗುತ್ತಾರೆ.

ಇದೀಗ ಈ ನೋಟದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ನೆಟ್ಟಿಗರು ಟ್ರೋಲ್ ಮಾಡಲು ಶುರುಮಾಡಿದ್ದಾರೆ.

ಇನ್ನು ಸಿದ್ದರಾಮಯ್ಯ ತನ್ನನ್ನು ಮೇಲಿಂದ ಕೆಳಗಿನವರೆಗೆ ನೋಡುತ್ತಿರುವುದು ನಿರೂಪಕಿಗೂ ಗೊತ್ತಾಗುತ್ತದೆ. ಅವರು ಏನು ಎಂಬಂತೆ ಮಾಜಿ ಮುಖ್ಯಮಂತ್ರಿ ಕಡೆ ನೋಡುತ್ತಾರೆ. ಸಿದ್ದರಾಮಯ್ಯ ಮಾತ್ರ ಏನನ್ನೂ ಹೇಳದೆ ಮುಂದೆ ಸಾಗುತ್ತಾರೆ.

ಇದೀಗ ಅನೇಕರಿಗೆ ಅವರು ಯಾಕೆ ಹಾಗೆ ಆಶ್ಚರ್ಯಚಕಿತರಾಗಿ ನೋಡಿದರು ಅನ್ನೋ ಪ್ರಶ್ನೆ ಕಾಡಿದೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!