ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅಪ್ಪಿತಪ್ಪಿಯೂ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಬೇಡಿ: ಯಾವುದು? ಇಲ್ಲಿದೆ ನೋಡಿ ಲಿಸ್ಟ್

ಬೆಳಗ್ಗೆ ಸಾಮಾನ್ಯವಾಗಿ 8 ಗಂಟೆಗಿಂತ ಹೆಚ್ಚು ಕಾಲ ಹೊಟ್ಟೆ ಖಾಲಿ ಇರುತ್ತದೆ. ಈ ವೇಳೆ ನಾವು ಆದಷ್ಟು ಪೌಷ್ಠಿಕ ಆಹಾರಗಳನ್ನು ಸೇವಿಸಬೇಕು. ಕೆಲವೊಮ್ಮೆ ನಾವು ತಿಳಿದೋ, ತಿಳಿಯದೆಯೋ ಅನಾರೋಗ್ಯಕ್ಕೆ ತುತ್ತಾಗಿಸುವ ಆಹಾರಗಳನ್ನು ಸೇವಿಸಿಬಿಡುತ್ತೇವೆ.. ಆದರೆ ನೆನಪಿಡಿ ಇನ್ನು ಮುಂದೆ ಈ ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ.

ಸಿಹಿ ತಿನಿಸು:
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸಕ್ಕರೆ ಮಿಶ್ರಿತ ಸಿಹಿ ಪದಾರ್ಥ ಸೇವಿಸುವುದರಿಂದ ಮಧುಮೇಹಕ್ಕೆ ತುತ್ತಾಗುವ ಸಾಧ್ಯತೆ ಇದೆ.

ಯೋಗರ್ಟ್:
ಖಾಲಿ ಹೊಟ್ಟೆಯಲ್ಲಿ ಆದಷ್ಟು ಹೆಚ್ಚು ಕೊಬ್ಬಿನಾಂಶವಿರುವ ಹಾಲಿನ ಪದಾರ್ಥಗಳನ್ನು ಸೇವಿಸಬೇಡಿ. ಇದನ್ನು ಸೇವಿಸುವುದರಿಂದ ದೇಹದಲ್ಲಿನ ಒಳ್ಳೆಯ ಬ್ಯಾಕ್ಟೀರಿಯ ನಾಶವಾಗುತ್ತದೆ.

ಮಸಾಲಾ ಆಹಾರ:
ಖಾಲಿ ಹೊಟ್ಟೆಯಲ್ಲಿ ಮಸಾಲಾ ಅಥವಾ ಕಾರದ ಆಹಾರ ಸೇವಿಸುವುದರಿಂದ ಜೀರ್ಣಕ್ರಿಯೆಗೆ ತೊಡಕುಂಟು ಮಾಡುತ್ತದೆ.

ಟೊಮಾಟೋ:
ಟೊಮಾಟೋ ಸೇವಿಸುವುದರಿಂದ ಅದರಲ್ಲಿರುವ ಟ್ಯಾನಿಕ್ ಆಸಿಡ್ ದೇಹದಲ್ಲಿ ಅಸಿಡಿಟಿ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತದೆ.

ಸೌತೆಕಾಯಿ:
ಹಸಿ ಸೌತೆಕಾಯಿಯಲ್ಲಿರುವ ಅಮಿನೋ ಆಸಿಡ್ ಅಂಶಗಳು ಎದೆಉರಿ, ಹೊಟ್ಟೆ ನೋವು ಸಮಸ್ಯೆಗಳು ಕಾಡುತ್ತದೆ.

ಬಾಳೆಹಣ್ಣು:
ಬಾಳೆ ಹಣ್ಣು ರಕ್ತದಲ್ಲಿ ಮೆಗ್ನೀಶಿಯಂ ಅಂಶವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಕಾಡುತ್ತದೆ.

ಸಿಟ್ರಸ್ ಹಣ್ಣುಗಳು:
ದ್ರಾಕ್ಷಿ, ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳಲ್ಲಿನ ಆಸಿಡ್ ಗಳು ಎದೆ ಉರಿ, ಹೊಟ್ಟೆಯಲ್ಲಿ ಹುಣ್ಣು ಆಗುವ ಸಾಧ್ಯತೆ ಇರುತ್ತದೆ.

ತಂಪು ಪಾನೀಯ:
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಂಪಾದ ಜ್ಯೂಸ್, ಕೋಲ್ಡ್ ಕಾಫಿ ಸೇವಿಸೋದ್ರಿಂದ ಜೀರ್ಣಕ್ರಿಯೆ ಸಮಸ್ಯೆ ಕಾಡುತ್ತದೆ. ಬಸಲಿಗೆ ಬಿಸಿ ನೀರು ಕುಡಿಯುವುದು ಉತ್ತಮ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss