ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಯೋಗ ಮಾಡುವಾಗ ಈ ಮುದ್ರೆ ಮಾಡೋದನ್ನ ಮರೆಯಬೇಡಿ..ಪ್ರಾಣ ಮುದ್ರೆಯಲ್ಲಿದೆ ಬಹಳಷ್ಟು ಲಾಭಗಳು

ಪ್ರತಿನಿತ್ಯ ಯೋಗ, ಪ್ರಾಣಾಯಾಮ, ಮುದ್ರೆಗಳು ತುಂಬಾ ಮುಖ್ಯ. ಆದರೆ ಇದರಲ್ಲಿ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುವ ಪ್ರಾಣ ಮುದ್ರೆಯನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಈ ಪ್ರಾಣಮುದ್ರೆ ಮಾಡೋದು ಹೇಗೆ? ಯಾವೆಲ್ಲಾ ಲಾಭಗಳಿವೆ ಇಲ್ಲಿ ನೋಡಿ..

  • ರಕ್ತದೊತ್ತಡ: ಪ್ರಾಣ ಮುದ್ರೆಯನ್ನು ಪ್ರತಿ ನಿತ್ಯ ಅಭ್ಯಾಸ ಮಾಡುವುದರಿಂದ ರಕ್ತ ಸಂಚಲನ ಹೆಚ್ಚಾಗಿ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.
  • ಕೂದಲು: ಇದರಿಂದ ಕೂದಲು ಮತ್ತಷ್ಟು ಬಲಗೊಳ್ಳಲಿದೆ. ಇದರಿಂದ ಕೂಲುದುರುವಿಕೆ ಕೂಡ ಕಡಿಮೆಯಾಗುತ್ತದೆ.
  • ಶ್ವಾಸಕೋಶ: ನಿರಂತರ ಪ್ರಾಣಮುದ್ರೆ ಅಭ್ಯಾಸದಿಂದ ಉಸಿರಾಟದ ಸಮಸ್ಯೆ ನಿವಾರಣೆಯಾಗಲಿದೆ.
  • ಆಲಸ್ಯ ದೂರ: ದಿನದಲ್ಲಿ ನಮಗೆ ಆಲಸ್ಯ ಹೆಚ್ಚಾದರೆ ಪ್ರಾಣ ಮುದ್ರೆ ಮಾಡಿ. ಇದರಿಂದ ಆಲಸ್ಯ ಹೋಗಲಾಡಿಸಿ ಮೂಲಾಧಾರವನ್ನು ಸಕ್ರಿಯಗೊಳಿಸಲಿದೆ.
  • ಆಕಳಿಕೆ: ಆಕ್ಸಿಜನ್ ಕೊರತೆ ಅಥವಾ ನಿಶಕ್ತಿಯಿಂದ ಹೆಚ್ಚು ಆಕಳಿಕೆ ಬರುತ್ತದೆ. ಈ ಪ್ರಾಣ ಮುದ್ರೆ ಮಾಡುವುದರಿಂದ ಆಕಳಿಕೆ ನಿಯಂತ್ರಿಸಬಹುದು.

ಪ್ರಾಣ ಮುದ್ರೆ ಮಾಡೋದು ಹೇಗೆ?

  • ಪದ್ಮಾಸನದಲ್ಲಿ ಕುಳಿತುಕೊಳ್ಳಿ.
  • ಕಿರು ಬೆರಳು ಮತ್ತು ಉಂಗುರ ಬೆರಳನ್ನು ಹೆಬ್ಬೆರಳಿನ ತುದಿಗೆ ಜೋಡಿಸಿ.
  • ಉಳಿದ ಬೆರಳುಗಳನ್ನು ನೇರವಾಗಿ ಇಟ್ಟುಕೊಳ್ಳಿ.
  • ದಿನದಲ್ಲಿ 15 ರಿಂದ 30 ನಿಮಿಷ, ಗರಿಷ್ಠ 45 ನಿಮಿಷ ಈ ಮುದ್ರೆ ಮಾಡಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss