ಹೊಸದಿಗಂತ ಆನ್ ಲೈನ್ ಡೆಸ್ಕ್:
ದಿನೇ ದಿನೇ ಕೊರೋನಾ ಸೋಂಕು ಮತ್ತೆ ವ್ಯಾಪಿಸುತ್ತಿರುವ ಹಿನ್ನೆಲೆ ತಮಿಳುನಾಡಿನಲ್ಲಿಸೋಂಕು ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಜಾರಿ ಮಾಡಲಾಗಿದೆ. ವಿಧಾನಸಭಾ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ತಮಿಳುನಾಡು ಸರ್ಕಾರ ಸೋಂಕು ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಏಪ್ರಿಲ್ 10ರಿಂದ ಧಾರ್ಮಿಕ ಸಭೆಗಳನ್ನ ನಡೆಸಲು ನಿಷೇಧ ಹೇರಲಾಗಿದ್ದು, ಕ್ಲಬ್ಗಳು ಮತ್ತು ಚಿತ್ರಮಂದಿರಗಳಲ್ಲಿ ಶೇಕಡ 50ರಷ್ಟು ಆಕ್ಯುಪೆನ್ಸಿಗೆ ಮಾತ್ರ ಅನುಮತಿ ನೀಡಲಾಗಿದೆ.
ಇನ್ನು ಮದುವೆ ಸಮಾರಂಭಗಳಲ್ಲಿ 100 ಜನರಿಗೆ ಮತ್ತು ಅಂತ್ಯಕ್ರಿಯೆಗಳಿಲ್ಲಿ 50 ಜನರು ಮಾತ್ರ ಪಾಲ್ಗೊಳ್ಳಲು ಅವಕಾಶ. ಕ್ಯಾಬ್ಗಳಲ್ಲಿ ಪ್ರಯಾಣಿಸಲು ಮೂವರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಬೇರೆ ರಾಜ್ಯಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಇ-ಪಾಸ್ ಕಡ್ಡಾಯವಾಗಿದ್ದು, ಡಾಂಗಣ ಹಾಗೂ ಮೈದಾನಗಳಲ್ಲಿ ಯಾವುದೇ ಪ್ರೇಕ್ಷಕರಿಗೆ ಅನುಮತಿ ಇಲ್ಲ.
ಅದೇ ರೀತಿ ಹಣ್ಣು ಮತ್ತು ತರಕಾರಿ ಅಂಗಡಿಗಳು, ಶಾಪಿಂಗ್ ಮಾಲ್ಗಳು, ದೊಡ್ಡ ಅಂಗಡಿಗಳು, ಆಭರಣ ಮಳಿಗೆಗಳು ರಾತ್ರಿ 11 ಗಂಟೆಯವರೆಗೆ ಶೇ. 50ರಷ್ಟು ಸಾಮರ್ಥ್ಯದೊಂದಿಗೆ ಮಾತ್ರ ಕಾರ್ಯನಿರ್ವಹಿಸಬಹುದು.
ಜಿಲ್ಲೆಗಳ ನಡುವೆ ಮತ್ತು ಚೆನ್ನೈ ಒಳಗೆ ಬಸ್ಸುಗಳಲ್ಲಿ ಸೀಟ್ಗಳಿರುವಷ್ಟು ಪ್ರಯಾಣಿಕರನ್ನ ಮಾತ್ರ ಹತ್ತಿಸಿಕೊಳ್ಳಬೇಕು. ಬಸ್ಗಳಲ್ಲಿ ಜನರು ನಿಂತುಕೊಂಡು ಪ್ರಯಾಣಿಸಲು ಅವಕಾಶವಿಲ್ಲ.
ಕೊಯಂಬೆಡು ಸಗಟು ಮಾರುಕಟ್ಟೆಯಲ್ಲಿ ಸಣ್ಣ ವ್ಯಾಪಾರಿಗಳಿಗೆ ಮಾತ್ರ ಏಪ್ರಿಲ್ 10 ರಿಂದ ನಿಷೇಧ.
ಎಂಟರ್ಟೈನ್ಮೆಂಟ್ ಪಾರ್ಕ್ಗಳು, ಈವೆಂಟ್ ಸ್ಥಳಗಳು, ಮೃಗಾಲಯಗಳು, ಉದ್ಯಾನವನಗಳು ಹಾಗೂ ವಸ್ತುಸಂಗ್ರಹಾಲಯಗಳು ಕೇವಲ 50% ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅನುಮತಿ.
ಒಳಾಂಗಣ ಸ್ಥಳಗಳಲ್ಲಿ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಮನರಂಜನೆ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗರಿಷ್ಠ 200 ಜನರ ಸಾಮರ್ಥ್ಯದೊಂದಿಗೆ ಮಾತ್ರ ನಡೆಸಲು ಅನುಮತಿ.
ಈ ನಿಯಮಗಳು ಏಪ್ರಿಲ್ 10ರಿಂದ ಜಾರಿಯಾಗಲಿದ್ದು, ಏಪ್ರಿಲ್ 20ರವರೆಗೆ ಅನ್ವಯವಾಗಲಿವೆ.