Saturday, July 2, 2022

Latest Posts

ಜಿತೋ ಹಾಗೂ ಸೇವಾ ಭಾರತಿ ಆಶ್ರಯದಲ್ಲಿ ಕೊವೀಡ್-19 ಕೇರ್ ಐಸೋಲೇಶನ್ ಕೇಂದ್ರ ಸ್ಥಾಪನೆ: ಸಿದ್ದು ಅಲಗೂರ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………………

ದಿಗಂತ ವರದಿ ಬಳ್ಳಾರಿ:

ಕೊವೀಡ್ ಎರಡನೇ ಅಲೆ ಅರ್ಭಟ ಹೆಚ್ಚಿದ್ದು, ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲೆಂದು ವಿಎಸ್ ಕೆ ವಿಶ್ವ ವಿದ್ಯಾಲಯದ ಅಧೀನದಲ್ಲಿರುವ ಅತಿಥಿ ಗೃಹದಲ್ಲಿ 50 ಬೆಡ್ ಗಳನ್ನೊಳಗೊಂಡ ಕೋವೀಡ್ ಕೇರ್ ಐಸೋಲೇಶನ್ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಫ್ರೋ.ಸಿದ್ದು ಅಲಗೂರ್ ಅವರು ಹೇಳಿದರು.
ನಗರದ ಹೊರವಲಯದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೊವೀಡ್-19 ರಕ್ಕಸ ಅಲೆ ದಿನದಿಂದ ದಿನಕ್ಕೆ ಜಿಲ್ಲೆ ಅಷ್ಟೇ ಅಲ್ಲ ರಾಜ್ಯ ಸೇರಿದಂತೆ ದೇಶಾದ್ಯಂತ ಮುಂದುವರೆದಿದೆ. ನಿತ್ಯ ಸಾವು, ನೋವುಗಳು ಹೆಚ್ಚಿದ್ದು, ಈ ಸಂಕಷ್ಟ ಪರಿಸ್ಥಿತಿಯಲ್ಲಿ ಮಾನವೀಯತೆ ದೃಷ್ಟಿಯಿಂದ ರಾಜ್ಯದಲ್ಲೇ ಮೊದಲ ಬಾರಿಗೆ ವಿಶ್ವವಿದ್ಯಾಲಯ, ಜೈನ್ ಇಂಟರ್ ನ್ಯಾಶನಲ್ ಟ್ರೇಡ್ ಆರ್ಗನೈಜೇಶನ್(ಜಿತೊ) ಹಾಗೂ ಸೇವಾ ಭಾರತಿ ಆಶ್ರಯದಲ್ಲಿ ಸುಸಜ್ಜಿತ 50 ಬೆಡ್ ಗಳನ್ನೊಳಗೊಂಡ ಕೋವಿಡ್-19 ಕೇರ್ ಐಸೋಲೇಶನ್ ಕೇಂದ್ರವನ್ನು ಏ.5ರಿಂದ ಪ್ರಾರಂಭಿಸಲಾಗುವುದು, ಈ ಸೇವಾ ಕಾರ್ಯಕ್ಕೆ ಸ್ಥಳೀಯ ಸಂಘ ಸಂಸ್ಥೆಗಳು ಕೈ ಜೋಡಿಸಲು ಮುಂದೆ‌ ಬಂದಿವೆ ಎಂದರು.
ಸೇವಾ ಭಾರತಿ ಸಂಸ್ಥೆಯ ಮುಖ್ಯಸ್ಥ ಡಾ.ಭಾಸ್ಕರ್ ರೆಡ್ಡಿ ಅವರು ಮಾತನಾಡಿ, ವಿಎಸ್ ಕೆ‌ ವಿ.ವೀ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಸಾಮಾಜಿಕ ಕಳಕಳಿ ಇಟ್ಟುಕೊಂಡು, ಜಿತೋ ಹಾಗೂ ಸೇವಾ ಭಾರತಿ ಆಶ್ರಯದಲ್ಲಿ 50 ಬೆಡ್ ಗಳ ಕೋವೀಡ್ ಕೇರ್ ಐಸೋಲೇಶನ್ ಕೇಂದ್ರವನ್ನು ಪ್ರಾರಂಭಿಸಿದೆ. ಇದು ಬಡ ಹಾಗೂ ಮಧ್ಯಮ ವರ್ಗದವರಿಗೆ, ಚಿಕ್ಕ ಕುಟುಂಬದಲ್ಲಿ ಸೋಂಕಿಗೆ ಪೀಡಿತರಾದವರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಊಟ, ವಸತಿ, ಎಲ್ಲವೂ ಸಂಪೂರ್ಣ ಉಚಿತವಾಗಿರಲಿದೆ. ವೈದ್ಯಕೀಯ ಸಿಬ್ಬಂದಿಗಳು ಇರಲಿದ್ದು, ತೀವ್ರ ಸಮಸ್ಯೆಗಳು ಎದುರಾದಲ್ಲಿ ಸಂಬಂಧಿಸಿದವರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಕಲ್ಪಿಸಲಾಗುವುದು. ಇಲ್ಲಿ ಸೊಂಕಿತರ ಆರೈಕೆ, ಅಗತ್ಯ ವ್ಯವಸ್ಥೆ, ಮಾತ್ರೆ ಔಷಧಿಗಳ ವ್ಯವಸ್ಥೆ ಮಾತ್ರ ಇರಲಿದೆ. ಸೊಂಕಿತರಿಗೆ ಹೆಚ್ಚಿನ ತೊಂದರೆ ಎದುರಾದಲ್ಲಿ ಕೂಡಲೇ ಜಿಲ್ಲಾಡಳಿತದ ಗಮನಕ್ಕೆ ತರಲಾಗುವುದು, ಅವರಿಂದ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು, ಇದೋಂದು ಜನರ ಸೇವೆ ಸದವಕಾಶವಾಗಿದೆ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತ್ ಸಹ ಕಾರ್ಯವಾಹ ಪ್ರಸನ್ನ ಜೀ ಅವರು ಮಾತನಾಡಿ, ಈ ಕೊವೀಡ್ ಮಹಾಮಾರಿ ಸಂಕಷ್ಟದ ಸಂಧಿಗ್ನ ಪರಿಸ್ಥಿತಿಯಲ್ಲಿ ಕೈಲಾದಷ್ಟು ಜನರ ಸೇವೆ ಮಾಡಬೇಕೆಂದು ವಿಎಸ್ ಕೆ. ವಿ.ವೀ.ಯ ಅತಿಥಿ ಗೃಹದಲ್ಲಿ ಕೋವಿಡ್-19 ಕೇರ್ ಐಸೋಲೇಶನ್ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. ಈ ಕೇಂದ್ರಕ್ಕೆ ದಾಖಲಾಗ‌ ಬಯಸುವವರು ಜಿಲ್ಲಾಡಳಿತದ ಸೂಕ್ತ ಮಾರ್ಗದ ಮೂಲಕವೇ ಬರಬೇಕಿದೆ. ಕೋವೀಡ್ ಸೊಂಕಿತರಿಗೆ ಮಾತ್ರ ಅವಕಾಶ, ಇದರ ಜೊತೆಗೆ ವೈದ್ಯರ ಅಗತ್ಯ ಸಲಹೆ, ಸೂಚನೆ ಮೇರೆಗೆ ಐಸೋಲೇಶನ್ ಗೆ ಒಳಪಡುವ ರೋಗಿಗಳಿಗೆ ಮಾತ್ರ ಅವಕಾಶವಿದೆ. ಈ ಕೇಂದ್ರದಲ್ಲಿ ತಜ್ಞ ವೈದ್ಯರು, ಸಿಬ್ಬಂದಿಗಳು ಇರಲಿದ್ದು, ದಿನದ 24 ಗಂಟೆ ಸೇವೆ ಇರಲಿದೆ. ಈ ಕೇಂದ್ರ ಮಾದರಿಯಾಗಿದ್ದು, ಮನೆಯಲ್ಲಿ ತೆಗೆದುಕೊಳ್ಳುವ ಕಾಳಜೀಪೂರ್ಣ ವಾತಾವರಣವನ್ನು ಹೊಂದಿದೆ. ರೋಗಿಗಳಿಗೆ ಪೌಷ್ಠಿಕ ಆಹಾರ ಸೌಲಭ್ಯ, ನಿತ್ಯ ಅನುಭವಿ ತರಬೇತುದಾರರಿಂದ ಯೋಗಾ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಚೇತರಿಸಿಕೊಳ್ಳಲು ಉತ್ತಮ ಪುಸ್ತಕಗಳ ವಿತರಣೆ, ಶಿಕ್ಣಣಾತ್ಮಕ ಸೃಜನಶೀಲ ವಿಡಿಯೋಗಳನ್ನು ತೋರಿಸಲಾಗುವುದು. ಈ ಕೇಂದ್ರಲ್ಲಿ ಆಕ್ಸಿಜನ್ ಹಾಗೂ ವೆಂಟಿಲೇಟರ್ ಹಾಗೂ ಐಸಿಯು ನಂತಹ ಯಾವುದೇ ವ್ಯವಸ್ಥೆಗಳು ಇರೋಲ್ಲ ಎಂದರು. ಈ ಸಂದರ್ಭದಲ್ಲಿ ಜಿತೋ ಸಂಸ್ಥೆಯ ಅಧ್ಯಕ್ಷ ಸಿ.ಎ.ವಿನೋದ್ ಬಾಗ್ರೆಚಾ, ಕೈಲಾಶ್ ಜೈನ್, ಸತೀಶ್ ಕುಮಾರ್, ನರೇಶ್ ಚಿರಾನಿಯಾ, ವಿ.ವಿ.ಯ ಕುಲಸಚಿವರಾದ ಶಶಿಕಾಂತ ಉಡಕೇರಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss