ಜಿ-20 ಸಮ್ಮೇಳನಕ್ಕೆ ಕೋತಿಗಳ ಕಾಟ, NDMC ಅಧಿಕಾರಿಗಳು ಕೈಗೊಂಡ ನಿರ್ಧಾರವೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿಯಲ್ಲಿ ನಡೆಯುವ ಜಿ-20 ಶೃಂಗಸಭೆಗೆ ಭಾರತ ಸರ್ಕಾರವು ದೇಶದ ರಾಜಧಾನಿಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಿದೆ. ಆದರೆ ಈ ಸಭೆಗಳಿಗೆ ಕೋತಿಗಳ ಕಾಟ ಶುರುವಾಗಿದೆ. ದೆಹಲಿಯ ಐತಿಹಾಸಿಕ ಸ್ಥಳಗಳಲ್ಲಿಯೂ ಇವುಗಳದ್ದೇ ದರ್ಬಾರ್. ಜಿ-20 ಸಭೆಯನ್ನು ಭಾರತ ಸರ್ಕಾರವು ಅತ್ಯಂತ ಗಂಭೀರವಾಗಿ ಪರಿಗಣಿಸಿರುವುದರಿಂದ, ಯಾರಿಗೂ ತೊಂದರೆಯಾಗದಂತೆ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧವಾಗಿದೆ.

ಅದರ ಹಿನ್ನೆಲೆಯಲ್ಲಿ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ಜಿ-20 ಸಭೆಗಳಲ್ಲಿ ವಿದೇಶಿ ಅತಿಥಿಗಳಿಗೆ ಕೋತಿಗಳಿಂದ ಅನಾನುಕೂಲವಾಗದಂತೆ ನೋಡಿಕೊಳ್ಳಲು ಸಿದ್ಧವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ಶುರು ಮಾಡಿದ್ದು, ಜಿ-20 ಸಭೆಗಳ ಸ್ಥಳದಲ್ಲಿ ವಿದೇಶಿ ಅತಿಥಿಗಳು ತಂಗಲಿರುವ ಹೋಟೆಲ್‌ಗಳಲ್ಲಿ, ವಿದೇಶಿ ಅತಿಥಿಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಈ ಕಾರಣಕ್ಕಾಗಿಯೇ ದೆಹಲಿ ಸರ್ಕಾರವು ಮಂಗಗಳನ್ನು ಓಡಿಸಲು ಬಬೂನ್‌ಗಳಂತೆ ಕಿರುಚುವ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದೆ. ಜಿ-20 ಸಭೆಗಳು ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿದೆ. ಭಾರತವು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಈ ಸಭೆಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ದೆಹಲಿ ಸರ್ಕಾರ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!