Sunday, August 14, 2022

Latest Posts

ರಾಮ ಮಂದಿರ ನಿರ್ಮಾಣಕ್ಕೆ 5 ಕೋಟಿ ನಿಧಿ ನೀಡಿದ ನ್ಯೂ ಹೊರೈಝನ್ ಶಿಕ್ಷಣ ಸಂಸ್ಥೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ನ್ಯೂ ಹೊರೈಝನ್ ಎಜುಕೇಶನ್ ಇನ್ಸ್​ಟಿಟ್ಯೂಟ್​​ನ ಮುಖ್ಯಸ್ಥ ಡಾ.ಮೋಹನ್ ಮಂಘ್ನಾನಿ 5 ಕೋಟಿ ರೂಪಾಯಿಗಳ ಚೆಕ್​ನ್ನು ನೀಡಿದರು. ಆರ್​ಎಸ್​ಎಸ್​ನ ಜಂಟಿ ಪ್ರಧಾನ ಕಾರ್ಯದರ್ಶಿ ಮುಕುಂದ್ .ಜಿ ಅವರಿಗೆ ನಿಧಿ ಚೆಕ್​ ಹಸ್ತಾಂತರಿಸಿದ್ದಾರೆ.
ಈಗಾಗಲೇ ದೇಶದಾದ್ಯಂತ ಸಾರ್ವಜನಿಕರಿಂದ ನಿಧಿ ಸಂಗ್ರಹ ಮಾಡಲಾಗುತ್ತಿದ್ದು, ಈ ಮಧ್ಯೆ ಕೆಲವು ಗಣ್ಯರು ತಾವಾಗಿಯೇ ಮುಂದೆ ಬಂದು ರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ನೀಡುತ್ತಿದ್ದಾರೆ.
ನ್ಯೂ ಹೊರೈಝನ್ ಶಿಕ್ಷಣ ಸಂಸ್ಥೆಯು ಈ ಹಿಂದೆ ಕೊರೋನಾ ವಿರುದ್ಧ ಹೋರಾಟಕ್ಕೂ ಸಹಾಯ ಮಾಡಿತ್ತು. ಪಿಎಂ ಕೇರ್ಸ್​ ಫಂಡ್​ಗೆ ಸಂಸ್ಥೆಯ ವತಿಯಿಂದ 5 ಕೋಟಿ ರೂಪಾಯಿಗಳನಿಧಿಯನ್ನು ನೀಡಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss