Monday, August 8, 2022

Latest Posts

ಮತ್ತೆ ಶುರುವಾಗಲಿದೆ ಸಸ್ಪೆನ್ಸ್ ಸಿನಿಮಾ ‘ಶಿವಾಜಿ ಸೂರತ್ಕಲ್-2’: ಫಸ್ಟ್ ಲುಕ್ ಬಿಡುಗಡೆ ಮಾಡಿದ ಚಿತ್ರತಂಡ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇಂದು ನಟ ರಮೇಶ್ ಅವರಿಗೆ 57ನೇ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷದಿನದಂದು ಶಿವಾಜಿ ಸೂರತ್ಕಲ್ ನ ಚಿತ್ರತಂಡ  ರಮೇಶ್ ಅರವಿಂದ್ ರ ಹೊಸ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದೆ.
ಶಿವಾಜಿ ಸುರತ್ಕಲ್‌ ಸಸ್ಪೆನ್ಸ್‌-ಥ್ರಿಲ್ಲರ್‌ ಚಿತ್ರವಾಗಿದ್ದು, ಈಗ ಆ ಚಿತ್ರದ ಮುಂದುವರೆದ ಭಾಗದಲ್ಲಿ ನಟಿಸಲು ರಮೇಶ್ ಅರವಿಂದ್ ರೆಡಿಯಾಗಿದ್ದಾರೆ.
ಈ ಚಿತ್ರಕ್ಕೆ ಆಕಾಶ್‌ ಶ್ರೀವತ್ಸ ಆಕ್ಷನ್- ಕಟ್ ಹೇಳಲಿದ್ದು, ಅನೂಪ್‌ ಹಾಗೂ ರೇಝಾ ಕೆ.ಎನ್ ಈ ಚಿತ್ರದಲ್ಲಿ ಹೂಡಿಕೆ ಮಾಡಲಿದ್ದಾರೆ. ಸದ್ಯ ಸಿನಿಮಾದ ಶೂಟಿಂಗ್ ಅಕ್ಟೋಬರ್ ನಲ್ಲಿ ಪ್ರಾರಂಭಿಸಲು ಚಿತ್ರತಂಡ ಪ್ಲಾನ್ ಮಾಡಿದೆ. ಅರವಿಂದ್ ಜೊತೆಗೆ ರಾಧಿಕಾ ನಾರಾಯಣ್‌, ರಘುರಾಮನಕೊಪ್ಪ ಮತ್ತು ವಿದ್ಯಾಮೂರ್ತಿ ಪಾರ್ಟ್ 2ನಲ್ಲೂ ಕಾಣಿಸಿಕೊಳ್ಳಲಿದ್ದು, ಉಳಿದ ಪಾತ್ರಗಳಿಗೆ ಹೊಸಮುಖಗಳು ಪರಿಚಯಿಸಲಿದೆ.
1986ರಲ್ಲಿ ತೆರೆಕಂಡ ‘ಸುಂದರ ಸ್ವಪ್ನಗಳು’ ಎಂಬ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದ ರಮೇಶ್ ಅರವಿಂದ್ ಸುಮಾರು 140ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss