ಇಂಧನ ಕ್ಷೇತ್ರದಲ್ಲಿ ಹೊಸಮೈಲಿಗಲ್ಲು- ತಯಾರಾಗಿದೆ ಹಸಿರು ಹೈಡ್ರೋಜನ್‌ ಚಾಲಿತ ಟ್ರಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇಂಗಾಲ ಹೆಜ್ಜೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಭಾರತವು ಪಳೆಯುಳಿಕೆ ಇಂಧನಗಳಿಗೆ ಬದಲಾಗಿ ಹಸಿರು ಹೈಡ್ರೋಜನ್‌ ನಂತಹ ಪರ್ಯಾಯ ಇಂಧನಮಾರ್ಗಗಳನ್ನು ಹುಡುಕುತ್ತಿದ್ದು ಸಾರಿಗೆ ಕ್ಷೇತ್ರದಲ್ಲಿ ಹಸಿರು ಹೈಡ್ರೋಜನ್‌ ಅನ್ನು ಅಳವಡಿಸುವ ಘನ ಉದ್ದೇಶದೊಂದಿಗೆ ಅನೇಕ ಉಪಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಹೈಡ್ರೋಜನ್‌ ಚಾಲಿತ ಕಾರುಗಳೂ ಸಿದ್ಧವಾಗಿದೆ. ಇದೀಗ ಈ ನಿಟ್ಟಿನಲ್ಲಿ ಮತ್ತೊಂದು ಪ್ರಮುಖ ಬದಲಾವಣೆಯಾಗಿದ್ದು ಹಸಿರು ಹೈಡ್ರೋಜನ್‌ ಚಾಲಿತ ಟ್ರಕ್‌ ಸಿದ್ಧಗೊಂಡಿದೆ.

ಭಾರತದ ಪ್ರಮುಖ ಕೈಗಾರಿಕಾ ಸಂಸ್ಥೆಯಾದ ರಿಲಯನ್ಸ್‌ ಇಂಡಸ್ಟ್ರೀಸ್‌ ಹಾಗು ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿಯಾದ ಅಶೋಕ್‌ ಲೇಲ್ಯಾಂಡ್‌ ಕಂಪನಿಗಳ ಸಹಯೋಗದಲ್ಲಿ ದೊಡ್ಡ ದೊಡ್ಡ ಟ್ರಕ್ಕುಗಳಲ್ಲಿ ಅಳವಡಿಸಬಹುದಾದ ಈ ಹೈಡ್ರೋಜನ್‌ ಚಾಲಿತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದ್ದು ನಿನ್ನೆಯಷ್ಟೇ ಕರ್ನಾಟಕದಲ್ಲಿ ಉದ್ಘಾಟನೆಗೊಂಡಿರುವ ʼಇಂಡಿಯಾ ಎನರ್ಜಿ ವೀಕ್‌ʼ ನಲ್ಲಿ ಪ್ರಧಾನಿ ಮೋದಿ ಈ ಹೈಡ್ರೋಜನ್‌ ಚಾಲಿತ ತಂತ್ರಜ್ಞಾನವನ್ನೂ ಅನಾವರಣಗೊಳಿಸಿದ್ದಾರೆ.

ಈ ತಂತ್ರಜ್ಞಾನವು ಸರಕುಗಳ ಸಾಗಣೆಯಲ್ಲಿ ಬಳಕೆಯಾಗುವ ದೊಡ್ಡ ದೊಡ್ಡ ಟ್ರಕ್ಕುಗಳಲ್ಲಿ ಬಳಕೆಮಾಡಬಹುದಾಗಿದ್ದು ಸಾಂಪ್ರದಾಯಿಕ ಡೀಸೆಲ್ ಟ್ರಕ್‌ಗಳಿಗೆ ಸಮನಾದ ಕಾರ್ಯಕ್ಷಮತೆಯನ್ನು ನೀಡುತ್ತದೆ. ಶಬ್ದವನ್ನೂ ಕಡಿಮೆ ಮಾಡಲಿದ್ದು ಇದರ ನಿರ್ವಹಣಾ ವೆಚ್ಚದಲ್ಲಿಯೂ ಕಡಿತವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ಶೂನ್ಯ ಪ್ರಮಾಣದಲ್ಲಿ ಹೊಗೆಯುಗುಳುತ್ತದೆ ಇದು ಭವಿಷ್ಯದ ಹಸಿರು ಸಾರಿಗೆಗೆ ಮಹತ್ವದ ಕೊಡುಗೆ ನೀಡಲಿದೆ ಎಂದು ರಿಲಯನ್ಸ್‌ ಕಂಪನಿ ಹೇಳಿದೆ.

ಈಗಾಗಲೇ ಮಾನವ ಪ್ರಯಾಣಕ್ಕೆ ಅಗತ್ಯವಿರುವ ಹೈಡ್ರೋಜನ್‌ ಕಾರುಗಳ ಸಂಶೋಧನೆಯಾಗಿದೆ. ಆದರೆ ಪ್ರಸ್ತುತ ಸಂಶೋಧನೆಯಾಗಿರುವ ಈ ತಂತ್ರಜ್ಞಾನವು ಸರಕುಸಾಗಣೆ ಟ್ರಕ್ಕು ಅಳವಡಿಕೆ ಮಾಡಬಹುದಾಗಿದ್ದು  ಇವುಗಳ ಅಳವಡಿಕೆಯು ಗಣನೀಯ ಪ್ರಮಾಣದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲಿದೆ. ಆ ಮೂಲಕ ಭಾರತದ ಇಂಗಾಲ ಹೆಜ್ಜೆಗಳನ್ನು ಕಡಿಮೆ ಮಾಡುವ ಉದ್ದೇಶಕ್ಕೆ ಕೊಡುಗೆ ನೀಡಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!