Thursday, August 18, 2022

Latest Posts

ಕೊಹ್ಲಿಯಿಂದ ಹೊಸ ಮೈಲಿಗಲ್ಲುಗಳು

ಹೊಸದಿಗಂತ ಆನ್ ಲೈನ್ ಡೆಸ್ಕ್:

ವಿರಾಟ್ ಕೊಹ್ಲಿ ಎರಡನೇ ಟಿ20 ಪಂದ್ಯದಲ್ಲಿ ಅಜೇಯ 73 ರನ್ ಗಳಿಸುವುದರೊಂದಿಗೆ ಕೆಲವು ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ.
ಇದೀಗ ವಿರಾಟ್ ಕೊಹ್ಲಿ ಟಿ-20 ಕ್ರಿಕೆಟಿನಲ್ಲಿ 3000 ರನ್ ಪೂರೈಸಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ. ಈಗ ಕೊಹ್ಲಿ 87 ಪಂದ್ಯಗಳಿಂದ 3000 ರನ್ ಗಳಿಸಿದಂತಾಗಿದೆ. ಅವರ ಸರಾಸರಿ 50.86.
ವಿರಾಟ್ ಕೊಹ್ಲಿ ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ 12,000 ರನ್ ಪೂರೈಸಿದ ಮೂರನೇ ಆಟಗಾರರಾಗಿದ್ದಾರೆ. ಅವರು ಇಂತಹ ಸಾಧನೆ ಮಾಡಿದ ರಿಕಿ ಪಾಂಟಿಂಗ್ ಮತ್ತು ಗ್ರೇಮ್ ಸ್ಮಿತ್ ಅವರ ಸಾಲಿನಲ್ಲಿ ಸೇರಿದ್ದಾರೆ.
ಇದೀಗ ಕೊಹ್ಲಿ ಟಿ20 ಕ್ರಿಕೆಟಿನಲ್ಲಿ 26ನೇ ಅರ್ಧಶತಕ ದಾಖಲಿಸಿದ್ದು, ಆ ಮೂಲಕ ರೋಹಿತ್ ಶರ್ಮಾ ದಾಖಲೆಯನ್ನು ಮುರಿದಿದ್ದಾರೆ. ರೋಹಿತ್ ಶರ್ಮಾ 25 ಟಿ-20 ಅರ್ಧ ಶತಕ ದಾಖಲಿಸಿದ್ದಾರೆ.
ಟಿ20 ಯಲ್ಲಿ ಕೊಹ್ಲಿ ನಾಯಕನಾಗಿ ದಾಖಲಿಸಿದ 10ನೇ ಅರ್ಧ ಶತಕವಿದು. ನಾಯಕನಾಗಿ ಅತಿ ಹೆಚ್ಚು ಅರ್ಧಶತಕ ದಾಖಲಿಸಿದ ಹೆಸರು ನ್ಯೂಜಿಲೆಂಡಿನ ವಿಲಿಯಮ್ಸನ್ ಅವರ ಹೆಸರಲ್ಲಿದೆ. ವಿಲಿಯಮ್ಸನ್ 11 ಅರ್ಧ ಶತಕ ಬಾರಿಸಿದ್ದು, ಕೊಹ್ಲಿ ಒಂದು ಅರ್ಧ ಶತಕದಿಂದ ಹಿಂದಿದ್ದಾರೆ ಅಷ್ಟೆ.
ನಾಯಕರಾಗಿ ಏಕದಿನ, ಟೆಸ್ಟ್ ಮತ್ತು ಟಿ20 ಈ ಮೂರೂ ವಿಭಾಗಗಳಲ್ಲಿ10ಕ್ಕಿಂತ ಹೆಚ್ಚು ಅರ್ಧ ಶತಕ ದಾಖಲಿಸಿರುವವರು ಕೊಹ್ಲಿ ಮತ್ತು ವಿಲಿಯಮ್ಸನ್ ಮಾತ್ರ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!