ಹೀಗೂ ಮಾಡಬಹುದು ಬಾದಾಮಿ ಜ್ಯೂಸ್…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 
ಬೇಕಾಗುವ ಸಾಮಗ್ರಿ:

ಒಂದು ಕಪ್ ಬಾದಾಮಿ
ಎರಡು ಕಪ್ ಸಕ್ಕರೆ
ಚಿಟಿಕೆ ಉಪ್ಪು
ನಾಲ್ಕು ಕಾಳು ಕಾಳುಮೆಣಸು,
ಹಾಲು
ಏಲಕ್ಕಿ
ನೀರು
ಮಾಡುವ ವಿಧಾನ:

ಹಿಂದಿನ ದಿನ ರಾತ್ರಿಯೇ ಶುಚಿಯಾಗಿ ತೊಳೆದ ಬಾದಾಮಿಗಳನ್ನು ನೀರಿನಲ್ಲಿ ನೆನೆಸಿಡಿ. ಮರುದಿನ ಬಾದಾಮಿಯ ಜೊತೆಗೆ, ಏಲಕ್ಕಿ, ಕಾಳುಮೆಣಸು, ಚಿಟಿಕೆ ಉಪ್ಪು ಹಾಕಿ ನುಣ್ಣನೆ ಅರೆದಿಟ್ಟುಕೊಳ್ಳಿ. ಎರಡುಲೋಟ ಹಾಲು, ಎರಡು ಲೋಟ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ ಕುದಿಯಲು ಒಲೆಯ ಮೇಲಿಡಿ. ಸಕ್ಕರೆ ಬೆರೆಸಿ ಚೆನ್ನಾಗಿ ಕುದಿಸಿ. ಈ ಮಿಶ್ರಣಕ್ಕೆ ನುಣ್ಣಗೆ ಅರೆದ ಬಾದಾಮಿ ಮಿಶ್ರಣ ಸೇರಿಸಿ ಗೊಟಾಯಿಸಿ ಕೆಳಗಿರಿಸಿ. ತಣ್ಣಗಾದ ನಂತರ ಜಾಡಿಯಲ್ಲಿ ತುಂಬಿ ಫ್ರಿಡ್ಜ್‍ನಲ್ಲಿಡಿ. ಬೇಕಾದಾಗ ಕೋಲ್ಡ್ ಹಾಲು ಬೆರೆಸಿ ಸರ್ವ್‍ಮಾಡಿ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!