ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷದ ಹಿನ್ನೆಲೆ ಇಂದು ದಕ್ಷಿಣ ಕಾಶಿ ಹಂಪಿಗೆ ಅನೇಕ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಹೊಸ ವರ್ಷವನ್ನು ಆಚರಿಸಲು ಹಂಪಿಗೆ ಬಂದಿದ್ದ ಪ್ರವಾಸಿಗರು ಬೆಳಗ್ಗೆಯಿಂದಲೇ ಹಂಪಿಯ ಮಾತಂಗ ಬೆಟ್ಟದಲ್ಲಿ ಜಮಾಯಿಸಿದ್ದರು. ಬೆಟ್ಟದ ತುದಿಗೆ ಏರಿದ ಪ್ರವಾಸಿಗರು ವರ್ಷದ ಮೊದಲ ಸೂರ್ಯೋದಯವನ್ನು ನೋಡಿದರು. ದೇಶ-ವಿದೇಶಗಳಿಂದ ಆಗಮಿಸಿದ್ದ ಪ್ರವಾಸಿಗರು ಸೂರ್ಯೋದಯವನ್ನು ವೀಕ್ಷಿಸಿ ಬೆಟ್ಟದ ಮೇಲೆ ಕುಳಿತು ಧ್ಯಾನ ಮಾಡಿದರು.
ನೆರೆದ ಪ್ರವಾಸಿಗರು ಬೆಟ್ಟದ ತುದಿಯಿಂದ ಹಂಪಿಯ ಪ್ರಕೃತಿ ಸೌಂದರ್ಯವನ್ನು ಸವಿದರು. ಮತ್ತೊಂದೆಡೆ ಹಂಪಿಗೆ ಗುಂಪು ಗುಂಪಾಗಿ ಆಗಮಿಸಿದ ಪ್ರವಾಸಿಗರು ಸ್ಮಾರಕಗಳ ಮುಂದೆ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಸಂಭ್ರಮಿಸಿದರು.