ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಹೊಸ ವರ್ಷವನ್ನು ತುಂಬಾನೇ ಸೀರಿಯಸ್ ಆಗಿ ತೆಗೆದುಕೊಳ್ಳೋರು ಈಗಾಗಲೇ ನ್ಯೂ ಇಯರ್ ಪ್ಲಾನ್ ಮಾಡಿರುತ್ತಾರೆ. ಈ ಬಾರಿ ಹೊಸ ವರ್ಷ ಶನಿವಾರ ಬಂದಿರೋದ್ರಿಂದ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಸಾಲು ರಜೆಗಳು ಸಿಗುತ್ತವೆ. ಮೂರು ದಿನ ಸಮಯ ಇರೋದ್ರಿಂದ ನ್ಯೂ ಇಯರ್ಗೆ ಏನು ಮಾಡಬಹುದು.. ಪ್ಲಾನ್ಸ್ ಲಿಸ್ಟ್ ಇಲ್ಲಿದೆ..
ಮನೆಯಲ್ಲೇ ಪಾರ್ಟಿ ಮಾಡಿ. ಈಗ ಎಲ್ಲಾ ಕಡೆ ನ್ಯೂ ಇಯರ್ ಎಂದೇ ದುಡ್ಡು ಹೆಚ್ಚು ಇರುತ್ತದೆ. ಮನೆಯಲ್ಲೇ ಪಾರ್ಟಿ ಮಾಡೋದು ಬೆಸ್ಟ್.
ಸ್ನೇಹಿತರೆಲ್ಲ ಕೂಡಿ ಮನೆಯಲ್ಲೇ ಗೇಮ್ಸ್ ನೈಟ್ ಆರ್ಗನೈಸ್ ಮಾಡಿ. ರಾತ್ರಿಯಿಡೀ ಗೇಮ್ಸ್ ಆಡುತ್ತಾ ಸಮಯ ಕಳೆಯಬಹುದು.
ಟ್ರಾವೆಲ್ ಮಾಡುವ ಅಭ್ಯಾಸ ಇದ್ದರೆ ಈಗಲೇ ಟಿಕೆಟ್ಸ್ ಬುಕ್ ಮಾಡಿ ಹೊರಟುಬಿಡಿ.
ಸ್ನೇಹಿತರದ್ದು ಅಥವಾ ಬಂಧುಗಳ ಫಾರ್ಮ್ ಹೌಸ್ ಇದ್ದರೆ ಅಲ್ಲಿ ಥೀಮ್ ಪಾರ್ಟಿ ಮಾಡಬಹುದು. ಸ್ನೇಹಿತರು, ಕುಟುಂಬದವರು ಕೂಡಿ ಪಾರ್ಟಿ ಮಾಡಬಹುದು.
ಮ್ಯಾಗಿ ಪಾರ್ಟಿ ಮಾಡಬಹುದು. ಬ್ಯಾಚುಲರ್ಸ್ ಅಥವಾ ಸಂಬಳ ಬಂದಿಲ್ಲ ಎಂದಾದರೆ ಇದಕ್ಕಿಂತ ಬೆಸ್ಟ್ ಪಾರ್ಟಿ ಬೇಕಾ, ಸ್ನೇಹಿತರೆಲ್ಲಾ ಸೇರಿ ಮಧ್ಯರಾತ್ರಿ ಮ್ಯಾಗಿ ತಿನ್ನುತ್ತಾ ಮಾತನಾಡುತ್ತಾ ಕೂರಬಹುದು.
ನಿಮಗೆ ಗೊತ್ತಿರುವ ಕ್ಯಾಂಪ್ ಅಥವಾ ಟೆಂಟ್ಗಳಲ್ಲಿ ಇರುವ ಮಕ್ಕಳ ಜೊತೆ ಹೊಸ ವರ್ಷದಂದು ಒಂದಷ್ಟು ಸಮಯ ಕಳೆಯಿರಿ. ನೀವು ತಿನ್ನುವುದರಲ್ಲಿ ಅವರಿಗೂ ಸ್ವಲ್ಪ ನೀಡಿ.