ದುಬಾರಿ ನಗರಗಳ ಪಟ್ಟಿಯಲ್ಲಿ ನ್ಯೂಯಾರ್ಕ್, ಸಿಂಗಾಪುರ: ಹಣದುಬ್ಬರ ಮತ್ತು ಪೆಟ್ರೋ ಬೆಲೆ ಏರಿಕೆಯೇ ಕಾರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನ್ಯೂಯಾರ್ಕ್ ಮತ್ತು ಸಿಂಗಾಪುರ ವಿಶ್ವದ ಅತ್ಯಂತ ದುಬಾರಿ ನಗರಗಳಾಗಿವೆ. ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದು ಈ ವರ್ಷದ ಅತ್ಯಂತ ದುಬಾರಿ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯ ಪ್ರಕಾರ, ನ್ಯೂಯಾರ್ಕ್ ಮತ್ತು ಸಿಂಗಾಪುರವು ಅತ್ಯಂತ ದುಬಾರಿ ನಗರಗಳ ಪಟ್ಟಿಯಲ್ಲಿ ಜಂಟಿಯಾಗಿ ಮೊದಲ ಸ್ಥಾನದಲ್ಲಿವೆ.

ಏರುತ್ತಿರುವ ತೈಲ ಬೆಲೆಗಳು ಮತ್ತು ಹಣದುಬ್ಬರದಿಂದಾಗಿ, ಈ ನಗರಗಳಲ್ಲಿ ವಾಸಿಸುವುದು ತುಂಬಾ ದುಬಾರಿ ವ್ಯವಹಾರವಾಗಿದೆ.  ಈ ಪಟ್ಟಿಯಲ್ಲಿ ನ್ಯೂಯಾರ್ಕ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಹತ್ತು ವರ್ಷಗಳಲ್ಲಿ ಸಿಂಗಾಪುರ ಎಂಟು ಬಾರಿ ಅಗ್ರಸ್ಥಾನ ಗಳಿಸಿದೆ. ಇದೇ ಮೊದಲ ಬಾರಿಗೆ ಟಾಪ್-10ರಲ್ಲಿ ಆಸ್ಟ್ರೇಲಿಯಾದ ಸಿಡ್ನಿ ನಗರ ಸ್ಥಾನ ಪಡೆದಿದೆ. ರಷ್ಯಾದ ಮಾಸ್ಕೋ ಮತ್ತು ಸೇಂಟ್ ಪೀಟರ್ಸ್ಬರ್ಗ್ ಕೂಡ ಈ ಪಟ್ಟಿಯಲ್ಲಿವೆ. ವೆನೆಜುವೆಲಾ ರಾಜಧಾನಿ ಸಾರಾಸೆನ್ಸ್ 132 ನೇ ಸ್ಥಾನದಲ್ಲಿದೆ. ಏರುತ್ತಿರುವ ಪೆಟ್ರೋಲ್ ಬೆಲೆಗಳು, ಕರೆನ್ಸಿಯ ಅಪಮೌಲ್ಯೀಕರಣ, ಹಣದುಬ್ಬರ ಮತ್ತು ಬಲವಾದ ಯುಎಸ್‌ ಡಾಲರ್‌ನಂತಹ ಅಂಶಗಳಿಂದಾಗಿ ಇವುಗಳು ಪಟ್ಟಿಯಲ್ಲಿರುವ ಅತ್ಯಂತ ದುಬಾರಿ ನಗರಗಳಲ್ಲಿ ಸೇರಿವೆ.

ಈ ಹಿಂದೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ನಗರಗಳು ಸ್ಥಾನ ಕಳೆದುಕೊಂಡಿವೆ. ಜಪಾನ್‌ನ ರಾಜಧಾನಿ ಟೋಕಿಯೊ, ಒಸಾಕಾ, ಸ್ಟಾಕ್‌ಹೋಮ್ ಮತ್ತು ಲಕ್ಸೆಂಬರ್ಗ್‌ನಂತಹ ನಗರಗಳು ಪಟ್ಟಿಯ ಕೆಳಭಾಗಕ್ಕೆ ಬಿದ್ದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!