ಟಿ20 ವಿಶ್ವಕಪ್​ ಟೂರ್ನಿಗೆ ನ್ಯೂಜಿಲ್ಯಾಂಡ್ ತಂಡ ಪ್ರಕಟ: 7ನೇ ಸಲ ವಿಶ್ವಕಪ್​ ಆಡಲಿರುವ ಗಪ್ಟಿಲ್​!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಟಿ20 ವಿಶ್ವಕಪ್​ ಟೂರ್ನಿ​​​ಗೋಸ್ಕರ ನ್ಯೂಜಿಲ್ಯಾಂಡ್ ತಂಡ ಪ್ರಕಟವಾಗಿದೆ. 15 ಸದಸ್ಯರ ಬಳಗದಲ್ಲಿ ಅನುಭವಿ ಆಟಗಾರ ಮಾರ್ಟಿನ್ ಗಪ್ಟಿಲ್​​ಗೆ ಮಣೆ ಹಾಕಲಾಗಿದೆ. ಈ ಮೂಲಕ ಕಿವೀಸ್ ಆಟಗಾರ ವಿಶ್ವಕಪ್​​ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ವಿಶ್ವಕಪ್​ಗೆ ನ್ಯೂಜಿಲ್ಯಾಂಡ್ ತಂಡ ಹೀಗಿದೆ: ಕೇನ್​ ವಿಲಿಯಮ್ಸನ್​(ಕ್ಯಾಪ್ಟನ್​), ಫಿನ್​ ಅಲೆನ್​​, ಟ್ರೆಂಟ್​ ಬೌಲ್ಟ್​, ಮಿಚೆಲ್​​​ ಬ್ರಾಚ್ವೆಲ್​, ಮಾರ್ಕ್​ ಚಾಂಪನ್​, ಡ್ವೇನ್​ ಕಾನ್ವೆ, ಲೂಕಿ ಫರ್ಗ್ಯೂಸನ್​,ಮಾರ್ಟಿಲ್ ಗಫ್ಟಿಲ್​, ಆ್ಯಡಂ ಮಿಲ್ನೆ, ಡ್ರಾಲ್​ ಮಿಚೆಲ್​, ಜಿಮಿ ನಿಶಾಮ್​, ಗ್ಲೆನ್​​ ಫಿಲಿಪ್ಸ್​, ಮಿಚೆಲ್​ ಸ್ಯಾಂಟ್ನರ್, ಇಶ್ ಸೋಧಿ ಹಾಗೂ ಥಿಮ್ ಸೌಥಿ

ಟಿ20 ವಿಶ್ವಕಪ್​​ನಲ್ಲಿ ನ್ಯೂಜಿಲ್ಯಾಂಡ್ ತಂಡ ಅಕ್ಟೋಬರ್​ 22ರಂದು ಆಸ್ಟ್ರೇಲಿಯಾ ವಿರುದ್ಧ ಸೆಣಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಇದಾದ ಬಳಿಕ ಅಫ್ಘಾನಿಸ್ತಾನ ಹಾಗೂ ಇಂಗ್ಲೆಂಡ್​ ವಿರುದ್ಧ ಪಂದ್ಯವಾಡಲಿದೆ. ನ್ಯೂಜಿಲ್ಯಾಂಡ್ ತಂಡದ ನಾಯಕತ್ವವನ್ನು ಕೇನ್​ ವಿಲಿಯಮ್ಸನ್​ಗೆ ನೀಡಲಾಗಿದ್ದು, ಟಿ20ಯಲ್ಲಿ ಮೂರನೇ ಸಲ ತಂಡವನ್ನು ಅವರು ಮುನ್ನಡೆಸುವರು. ಮಾಹಿತಿ ಪ್ರಕಾರ, ಇದು ಅವರ ಕೊನೆಯ ಟಿ20 ವಿಶ್ವಕಪ್ ಆಗಿರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!