ಹೊಸ ದಿಗಂತ ಆನ್ ಲೈನ್ ಡೆಸ್ಕ್:
ನ್ಯೂಜಿಲೆಂಡ್ ತಂಡವು ಆಸ್ಟ್ರೇಲಿಯಾದೆದುರಿನ ಪ್ರಥಮ ಟಿ-20 ಪಂದ್ಯವನ್ನು ಗೆದ್ದಿದೆ.
ನ್ಯೂಜಿಲೆಂಡಿನ ಆಟಗಾರ ಡೇವನ್ ಕಾನ್ವೇ ಅಜೇಯ 99ರನ್ ಗಳಿಸುವ ಮೂಲಕ ತಮ್ಮ ತಂಡವು 20 ಓವರುಗಳಲ್ಲಿ 184 ಮಾಡಲು ನೆರವಾದರು. ಅವರ ಇನ್ನಿಂಗ್ಸ್ 10 ಬೌಂಡರಿ ಹಾಗೂ ಮೂರು ಸಿಕ್ಸರ್ ಒಳಗೊಂಡಿತ್ತು.
ಇದಕ್ಕುತ್ತರವಾಗಿ ಆಸ್ಟ್ರೇಲಿಯಾ 18 ಓವರುಗಳಲ್ಲಿ 131 ರನ್ಗಳಿಗೆ ಆಲೌಟಾಯಿತು.