ಕುಲಶಾಸ್ತ್ರ ಅಧ್ಯಯನ ಪ್ರಕಾರ ಮುಂದಿನ ಕ್ರಮ: ಕೆ.ಎಸ್.ಈಶ್ವರಪ್ಪ

ಹೊಸದಿಗಂತ ವರದಿ ಕಲಬುರಗಿ:

ಸಕಾ೯ರ ಕುಲಶಾಸ್ತ್ರದ ಅಧ್ಯಯನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಅವರು ನಗರದ ಐವನ್ ಇ ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,75 ವಷ೯ ಆಡಳಿತ ನೀಡಿದ ಕಾಂಗ್ರೆಸ್ ಪಕ್ಷ ಯಾಕೆ ಮೀಸಲಾತಿ ಹೆಚ್ಚಳ ಮಾಡಿಲ್ಲ.ದಲಿತರು, ಅಲ್ಪಸಂಖ್ಯಾತ ಜನರನ್ನು ಓಟ್ ಬ್ಯಾಂಕ್ ಮಾಡಿಕೊಂಡು ಅವರಿಗೆ ಅನ್ಯಾಯ ಮಾಡಿದೆ ಎಂದರು.

ಅಲ್ಪಸಂಖ್ಯಾತರನ್ನು ಮೀಸಲಾತಿಯಿಂದ ಮುಸ್ಲಿಮರನ್ನು ತೆಗೆಯುವ ವಿಚಾರವಾಗಿ ಮಾತನಾಡಿದರು. ಕುಲಶಾಸ್ತ್ರ ಅಧ್ಯಯನ ವರದಿ ಮೇಲೆ ಸಕಾ೯ರ ಮುಂದಿನ ಕ್ರಮ ತೆಗೆದೀಕೊಳಲಿದೆ ಎಂದ ಅವರು, ಎಸ್ಟಿ/ಎಸ್ಸಿಗೆ ಮೀಸಲಾತಿ ಹೆಚ್ಚಳ ಸಂವಿಧಾನ ಬದ್ದನಾ ? ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆಗೆ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಈ ಬಗ್ಗೆ ಚಚೆ೯ ನಡೆಸಬೇಕಿತ್ತು. ಸಭೆ ಹೊರಗೆ ಬಂದು ಈ ರೀತಿ ಗೊಂದಲ ಮೂಡಿಸುವ ಚಚೆ೯ ಸರಿಯಲ್ಲ.ಎಸ್ಸಿ/ಎಸ್ಟಿ ಜನರಲ್ಲಿ ಗೊಂದಲ ಉಂಟು ಮಾಡುವ ಕೆಲಸ ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದರು.

ಸಿದ್ದರಾಮಯ್ಯ ಡಬಲ್ ಗೆಮ್ ಆಡುವ ಕೆಲಸ ಮಾಡುತ್ತಿದ್ದಾರೆ. ವೀರಶೈವ ಲಿಂಗಾಯತ ರನ್ನು ಒಡೆದಿದ್ದು ಯಾರು ಎಂದು ಪ್ರಶ್ನಿಸಿದ ಅವರು,ಒಡೆಯುವುದರಿಂದಲೇ ಕಾಂಗ್ರೆಸ್ ಪಕ್ಷ ದೇಶದಿಂದಲೇ ನಶಿಸಿ ಹೋಗಿದೆ ಎಂದರು. ನಾವು ಹಿಂದೂತ್ವದ ಪರವಾಗಿದ್ದೇವೆ.ಹಿಂದೂತ್ವದಲ್ಲಿ ಕಡು ಬಡವರಿಗೆ ಮೀಸಲಾತಿ ಸಿಗಲಿ ಎಔಬ ನಮ್ಮ ಆಶಯವಾಗಿದೆ. ಶ್ರೀಮಂತ ವಗ೯ದವರಿಗೆ ಮೀಸಲಾತಿ ತೆಗೆಯಬೇಕು ಎಂಬುದು ನನ್ನ ಬೇಡಿಕೆ.ಎನೇ ಆದರೂ ಕುಲಶಾಸ್ತ್ರ ಅಧ್ಯಯನ ಪ್ರಕಾರ ಅತ್ಯಂತ ಹಿಂದುಳಿದ ವಗ೯ದವರಿಗೆ ಮೀಸಲಾತಿ ಸಿಗಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!