ಭಾರತದಲ್ಲಿ ಎಲ್‌ಟಿಟಿಇ ಪುನರುಜ್ಜೀವನಗೊಳಿಸಲು ಯತ್ನಿಸುತ್ತಿದ್ದ 9ಶ್ರೀಲಂಕಾ ಪ್ರಜೆಗಳ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಯೋತ್ಪಾದಕ ಗುಂಪು, ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸಲು ಜೊತೆಗೆ ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ತಿರುಚಿರಾಪಳ್ಳಿಯಲ್ಲಿರುವ ತಮಿಳು ನಿರಾಶ್ರಿತರ ವಿಶೇಷ ಶಿಬಿರದಿಂದ ಒಂಭತ್ತು ಶ್ರೀಲಂಕಾ ಪ್ರಜೆಗಳನ್ನು ಎನ್‌ಐಎ ಬಂಧಿಸಿದೆ.

ಬಂಧಿತ ಶ್ರೀಲಂಕಾದ ಇಬ್ಬರು ವ್ಯಕ್ತಿಗಳು ದುಬೈ, ಪಾಕಿಸ್ತಾನ ಮತ್ತು ಇರಾನ್ ನಡುವೆ ಆಗಾಗ್ಗೆ ಪ್ರಯಾಣಿಸುತ್ತಿದ್ದ ಪಾಕಿಸ್ತಾನ ಮೂಲದ ಡ್ರಗ್ ಡೀಲರ್ ಹಾಜಿ ಸಲೀಂ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಿಳಿಸಿದೆ. ಇವರು  ಭಾರತ ಮತ್ತು ಶ್ರೀಲಂಕಾದಲ್ಲಿ ಎಲ್‌ಟಿಟಿಇಯನ್ನು ಪುನರುಜ್ಜೀವನಗೊಳಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಈ ಪ್ರಕರಣವ ಸಿ.ಗುಣಶೇಖರನ್ ಅಲಿಯಾಸ್ ಗುಣ ಮತ್ತು ಪುಷ್ಪರಾಜ ಅಲಿಯಾಸ್ ಪೂಕುಟ್ಟಿ ಕಣ್ಣಾ ಮೂಲಕ ನಿಯಂತ್ರಿಸಲ್ಪಡುವ ಶ್ರೀಲಂಕಾದ ಡ್ರಗ್ ಮಾಫಿಯಾದ ಚಟುವಟಿಕೆಗಳಿಗೆ ಸಂಬಂಧಿಸಿದೆ. ಪಾಕಿಸ್ತಾನ ಮೂಲದ ಮಾದಕವಸ್ತು ಮತ್ತು ಶಸ್ತ್ರಾಸ್ತ್ರ ಪೂರೈಕೆದಾರ ಹಾಜಿ ಸಲೀಂ ಅವರ ಸಹಯೋಗದೊಂದಿಗೆ ಭಾರತ ಮತ್ತು ಶ್ರೀಲಂಕಾದಲ್ಲಿ ಅಕ್ರಮ ಮಾದಕವಸ್ತುಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಈ ವರ್ಷ ಜುಲೈ 8 ರಂದು ಎನ್‌ಐಎ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿ, ಈ ಸಂಬಂಧ ಇಂದು ಒಂಬತ್ತು ಶ್ರೀಲಂಕಾ ಪ್ರಜೆಗಳನ್ನು ಬಂಧಿಸಿರುವುದಾಗಿ ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಎನ್‌ಐಎಯಿಂದ ಬಂಧಿಸಲ್ಪಟ್ಟವರ ಹೆಸರು ಹೀಗಿದೆ. 

ಸಿ ಗುಣಶೇಖರನ್ ಅಲಿಯಾಸ್ ಗುಣ
ಪುಷ್ಪರಾಜ ಅಲಿಯಾಸ್ ಪೂಕುಟ್ಟಿ ಕಣ್ಣ
ಮೊಹಮ್ಮದ್ ಅಸ್ಮಿನ್
ಅಲಹಪ್ಪೆರುಮಗ ಸುನಿಲ್ ಘಮಿನಿ ಫೋನ್ಸಿಯಾ
ಸ್ಟಾನ್ಲಿ ಕೆನ್ನಾಡಿ ಫೆರ್ನಾಂಡೋ
ಲಾಡಿಯಾ ಚಂದ್ರಸೇನ
ಧನುಕ್ಕ ರೋಶನ್
ವೆಲ್ಲಾ ಸುರಂಕಾ ಮತ್ತು ತಿಲಿಪನ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!