ಉಗ್ರ ಯಾಸಿನ್ ಮಲಿಕ್’ಗೆ ಜೀವಾವಧಿ ಜೈಲು

(ಸಾಂದರ್ಭಿಕ ಚಿತ್ರ- ಯಾಸಿನ್ ಮಲಿಕ್ ಜತೆ ಯುಪಿಎ ಪ್ರಧಾನಿ ಮನಮೋಹನ ಸಿಂಗ್)

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಜಮ್ಮು-ಕಾಶ್ಮೀರದ ಉಗ್ರವಾದದ ಉತ್ತುಂಗದ ದಿನಗಳಲ್ಲಿ ಅಂಥ ಕೃತ್ಯಗಳ ಮುಂಚೂಣಿಯಲ್ಲಿದ್ದ ಯಾಸಿನ್ ಮಲಿಕ್ ಎಂಬ ಉಗ್ರನಿಗೆ ಕೊನೆಗೂ ಶಿಕ್ಷೆಯಾದಂತಾಗಿದೆ. ಎಲ್ಲರ ನಿರೀಕ್ಷೆ ಮರಣದಂಡನೆಯಾಗಿತ್ತಾದರೂ, ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯವು ಜೀವಾವಧಿ ಜೈಲುಶಿಕ್ಷೆ ಘೋಷಿಸಿದೆ.

ಈ ಹಿಂದಿನ ಸರ್ಕಾರಗಳಲ್ಲಿ ಪ್ರಧಾನಿಯನ್ನು ಭೇಟಿ ಮಾಡಿಕೊಂಡಿದ್ದ, ಮಾಧ್ಯಮ ವೇದಿಕೆಗಳಲ್ಲಿ ಯೂಥ್ ಐಕಾನ್ ಎನ್ನಿಸಿಕೊಂಡಿದ್ದ ಉಗ್ರನನ್ನು ಕೊನೆಗೂ ನ್ಯಾಯದ ಬಾಹುಗಳು ಹಿಡಿದಿವೆ ಎಂಬುದು ಸಮಾಧಾನಕರ ವಿಷಯ. ಈತನ ಉಗ್ರವಾದಿ ಕೃತ್ಯಗಳ ವಿರುದ್ಧ ಕಾಶ್ಮೀರಿ ಪಂಡಿತ ಸಮುದಾಯದ ಅನೇಕರು ಆಕ್ರೋಶ-ನೋವುಗಳನ್ನು ಹಂಚಿಕೊಂಡಿದ್ದರೂ ಮೋದಿ ಸರ್ಕಾರಕ್ಕಿಂತ ಮೋದಲಿನ ಸರ್ಕಾರಗಳು ಆ ಕುರಿತು ತನಿಖೆಯ ಪ್ರಯತ್ನಕ್ಕೇ ಹೋಗದೇ ಯಾಸಿನ್ ಮಲಿಕ್ ನನ್ನು ತುಷ್ಟೀಕರಣ ಮಾಡಿಕೊಂಡಿದ್ದವು.

ಯಾಸಿನ್ ಪ್ರಕರಣ ಸಾಗಿದ್ದು ಹೀಗೆ

  • ಉಗ್ರವಾದಕ್ಕೆ ಹಣಕಾಸಿನ ನೆರವು, ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಗಳ ಆರೋಪ, ಅಪರಾಧ ಸಂಚು, ಉಗ್ರ ಸಂಘಟನೆಯ ಸದಸ್ಯತ್ವ ಹೊಂದಿರುವುದು ಹಾಗೂ ರಾಷ್ಟ್ರದ್ರೋಹ- ಈ ಪ್ರಕರಣಗಳು ಯಾಸಿನ್ ಮಲಿಕ್ ವಿರುದ್ಧ ದಾಖಲಾಗಿದ್ದವು.
  • ನ್ಯಾಯಾಲಯದಲ್ಲಿ ಎಲ್ಲ ಆರೋಪಗಳ ವಿರುದ್ಧ ಯಾಸಿನ್ ಮಲಿಕ್ ಪ್ರತಿವಾದಿಸಲಿಲ್ಲವಾದ್ದರಿಂದ ಮೇ 19ಕ್ಕೆ ಕೋರ್ಟ್ ಆತನನ್ನು ತಪ್ಪಿತಸ್ಥ ಎಂದು ಘೋಷಿಸಿತ್ತು.
  • ಶಿಕ್ಷೆಯ ಪ್ರಮಾಣ ಪ್ರಕಟಿಸುವ ಮುನ್ನ ಕಳೆದೊಂದು ವಾರದಲ್ಲಿ ಯಾಸಿನ್ ಮಲಿಕ್ ಹಣಕಾಸು ಸ್ಥಿತಿಗತಿಗಳನ್ನು ಪರಿಶೀಲಿಸಲಾಗಿದೆ.
  • ರಾಷ್ಟ್ರೀಯ ಭದ್ರತಾ ದಳವು ಈತನಿಗೆ ಮರಣದಂಡನೇ ಆಗಬೇಕು ಎಂದು ವಾದಿಸಿತ್ತು
  • ಬುಧವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ ನ್ಯಾಯಾಲಯವು ಯಾಸಿನ್ ಮಲಿಕ್ ಗೆ ಜೀವಾವಧಿ ಜೈಲುವಾಸ ಶಿಕ್ಷೆ ವಿಧಿಸಿದೆ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!